ಮಾಣಿ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿ: ಐವರಿಗೆ ಗಂಭೀರ ಗಾಯ
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ಪಲ್ಟಿಯಾಗಿ ಗುಂಡಿಗೆ ಬಿದ್ದ ಘಟನೆ ಮಾಣಿ ಸಮೀಪ ಕೊಡಾಜೆ ಎಂಬಲ್ಲಿ ನಡೆದಿದೆ.

ಮಾಣಿ- ಪುತ್ತೂರು ರಸ್ತೆಯ ಮಾಣಿ ಮಠ ಎಂಬಲ್ಲಿ ಓಮ್ನಿ ಕಾರು ಪಲ್ಟಿ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಕುಶಾಲನಗರದಿಂದ ಪಣೋಲಿಬೈಲ್ ಕ್ಷೇತ್ರಕ್ಕೆ ಕುಟುಂಬ ಸಮೇತ ಬರುತ್ತಿದ್ದಾಗ ಅಪಘಾತ ನಡೆದಿದೆ.
ಘಟನೆ ಪರಿಣಾಮ ಓಮ್ನಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕನಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯರಾದ ವಿಕ್ಕಿ ಶೆಟ್ಟಿ ಮಾಣಿ ಮತ್ತು ತಂಡದವರ ಸಹಕಾರದಿಂದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




