ಕುಡುಪು ಅಶ್ರಫ್ ಗುಂಪು ಹತ್ಯೆ ಪ್ರಕರಣ: ಆರೋಪಿ ಮನೀಶ್ ಶೆಟ್ಟಿ, ಅನಿಲ್‌ಗೆ ಜಾಮೀನು
ಮಂಗಳೂರು: ಕುಡುಪು ಬಳಿ ಎ. 27ರಂದು ನಡೆದ ಕೇರಳದ ವಯನಾಡಿನ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಇಬ್ಬರಾದ ಮನೀಶ್ ಶೆಟ್ಟಿ ಮತ್ತು ಅನಿಲ್ ಕುಮಾರ್‌ಗೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವರಲ್ಲಿ 8 ಮಂದಿಗೆ ಜಾಮೀನು ಲಭಿಸಿದೆ. ಉಳಿದಂತೆ 13 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಕಳೆದ ಏಪ್ರಿಲ್ 27ರಂದು ಕ್ರಿಕೆಟ್ ಆಡುತ್ತಿದ್ದ ಗುಂಪೊಂದು ಕೇರಳದ ವಯನಾಡ್ ಮೂಲದ ಅಶ್ರಫ್‌ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಸ್ಥಳದಲ್ಲೇ ಅಶ್ರಫ್ ಮೃತಪಟ್ಟಿದ್ದರು.




