February 1, 2026

ಜಲಪಾತದ ನೀರಿನ ರಭಸಕ್ಕೆ ಸಿಲುಕಿ ವೈದ್ಯಕೀಯ ವಿದ್ಯಾರ್ಥಿ ಸಾವು

0
image_editor_output_image-1335213336-1761146756292.jpg

ಚೆನ್ನೈ: ಕೊಡೈಕೆನಾಲ್ ಬಳಿಯ ಜಲಪಾತದಲ್ಲಿ ತನ್ನ ಗೆಳೆಯರ ಜೊತೆ ಸ್ನಾನ ಮಾಡುವ ವೇಳೆ ನೀರಿನ ರಭಸಕ್ಕೆ ಸಿಲುಕಿ ಕೊಯಮತ್ತೂರು ಮೂಲದ ವೈದ್ಯಕೀಯ ವಿದ್ಯಾರ್ಥಿಯೋರ್ವ ಕೊಚ್ಚಿ ಹೋಗಿದ್ದು ಇದಾದ ಮೂರು ದಿನಗಳ ಬಳಿಕ ನಾಪತ್ತೆಯಾಗಿದ್ದ ವೈದ್ಯ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಯಮತ್ತೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿರುವ ನಂದಕುಮಾ‌ರ್ (೨೧) ಮೃತ ದುರ್ದೈವಿ.

ನಂದ ಕುಮಾ‌ರ್ ತನ್ನ ಹನ್ನೊಂದು ಮಂದಿ ಗೆಳೆಯರ ಜೊತೆ ಕಳೆದ ಶನಿವಾರ ಕೊಯಮತ್ತೂರಿನಿಂದ ಕೊಡೈಕೆನಾಲ್‌ಗೆ ತೆರಳಿದ್ದಾರೆ ಈ ಸಂದರ್ಭ ಕೊಡೈಕೆನಾಲ್ ಬಳಿಯ ಅಂಜುವೀಡು ಜಲಪಾತಕ್ಕೆ ತೆರಳಿದ ತಂಡದಲ್ಲಿ ನಂದಕುಮಾ‌ರ್ ಹಾಗೂ ಕೆಲವರು ಜಲಪಾತದಲ್ಲಿ ಈಜಲು ಮುಂದಾಗಿದ್ದಾರೆ ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನಂದಕುಮಾರ್‌ ಕೊಚ್ಚಿ ಹೋಗಿದ್ದ.

Leave a Reply

Your email address will not be published. Required fields are marked *

error: Content is protected !!