ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಮೃತ್ಯು
ಭಟ್ಕಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನಗುಂಡಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.
ಭಟ್ಕಳ ಫಿರ್ದೌಸ್ ನಗರ ನಿವಾಸಿ ಅನೀಸ್ ಮೊಕ್ತಿಶಂ ಎಂಬವರ ಪುತ್ರ ಮುಹಮ್ಮದ್ ಮೊಹೆಶಾಂ (18) ಮೃತಪಟ್ಟ ಯುವಕ.
ತೆಂಗಿನಗುಂಡಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಮುಹಮ್ಮದ್ ಮೊಹೆಶಾಂ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹೆದ್ದಾರಿ ಪ್ರವೇಶಿಸಿದ ವೇಳೆ ಕೇರಳದಿಂದ ಮುಂಬೈನತ್ತ ಸಾಗುತ್ತಿದ್ದ ಪ್ರೈವುಡ್ ಲಾರಿ ಢಿಕ್ಕಿ ಹೊಡೆದಿದೆ.





