December 15, 2025

ಅ.18,19,20ರಂದು ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ 24 ನೇ ಆಂಡ್ ನೇರ್ಚೆ ಮತ್ತು ಅಶ್-ಅರಿಯ್ಯ ಸನದುದಾನ ಮಹಾ ಸಮ್ಮೇಳನ: 20ರಂದು ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವದಲ್ಲಿ ಸನದುದಾನ ಸಮ್ಮೇಳನ

0
images.jpeg

ವಿಟ್ಲ: ದಕ್ಷಿಣ ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸುರಿಬೈಲ್, ಬಂಟ್ವಾಳ ಇದರ ಶಿಲ್ಪಿ ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ 24 ನೇ ಆಂಡ್ ನೇರ್ಚೆ ಮತ್ತು ಅಶ್-ಅರಿಯ್ಯ ಸನದುದಾನ ಮಹಾ ಸಮ್ಮೇಳನವು ಅಕ್ಟೋಬರ್ 18,19,20 ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಮತ್ತು ಜನರಲ್ ಮ್ಯಾನೇಜರ್ ಸಿ.ಎಚ್ ಮುಹಮ್ಮದಲಿ ಸಖಾಫಿ ತಿಳಿಸಿದರು.

18 ಶನಿವಾರ ಬೆಳಗ್ಗೆ 9:30 ಗಂಟೆಗೆ ಸಂಸ್ಥೆಯ ಕಾರ್ಯಾಧ್ಯಕ್ಷರು ಬಹು ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಳಾ‌ರ್ ನೇತೃತ್ವದಲ್ಲಿ ಝಿಯಾರತಿನೊಂದಿಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಚಯರ್ಮಾನ್ ಸುಲೈಮಾನ್ ಹಾಜಿ ಸಿಂಗಾರಿ ಧ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ನಂತರ ಉಲಮಾ, ಉಮರಾ, ಸಾದಾತ್ ನಾಯಕರು ಸೇರಿ ತಾಜುಲ್‌ ಉಲಮಾ ಆಡಿಟೋರಿಯಂ ಉದ್ಘಾಟಿಸುವಾಗ ಅಬ್ದುಲ್ ರವೂಫ್ (ಮಾಲಕರು, ಸುಲ್ತಾನ್ ಗೋಲ್ಡ್ ಮಂಗಳೂರು) ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ ಆರಂಭಗೊಳ್ಳುವ ಮಹಿಳಾ ತರಬೇತಿಯಲ್ಲಿ ಅನಸ್ ಅಮಾನಿ ಪುಷ್ಪಗಿರಿ ವಿಷಯಮಂಡನೆ ನಡೆಸಲಿದ್ದಾರೆ.
ದಿನಾಂಕ 19 ಅದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ವತಿಯಿಂದ ಬೃಹತ್ ರಕ್ತದಾನ ಮತ್ತು ಜನಪ್ರಿಯ ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯುವುದರೊಂದಿಗೆ 10.30 ಕ್ಕೆಸೌಹಾರ್ದ ಸಮಾರಂಭ ಆರಂಭಗೊಳ್ಳಲಿದೆ ಮದ್ಯಾಹ್ನ 2 ಗಂಟೆಗೆ ನಡೆಯುವ ಉಲಮಾ ಸಂಗಮಕ್ಕೆ ಜಾಮಿಯಾ ಸಅದಿಯ ಪ್ರೊಫೆಸರ್ ಸ್ವಾಲಿಹ್ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಸರಿಯಾಗಿ ಬೋಳಂತೂರಿನಿಂದ ಅಶ್-ಅರಿಯದವರೆಗೆ ಸಂದಲ್ ರ್ಯಾಲಿ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಬಹು ಸ್ವಾಲಿಹ್ ಉಸ್ತಾದರ ನೇತೃತ್ವದಲ್ಲಿ ಜಲಾಲಿಯ ರಾತೀಬ್ ಮತ್ತು ಯುವವಾಗ್ನಿ ಆತಾವುಲ್ಲಾ ಹಿಮಮಿ ಕುಪ್ಪೆಟ್ಟಿಯ ಪ್ರಭಾಷಣವೂ ನಡೆಯಲಿದೆ.

20 ಅಕ್ಟೋಬರ್ ಸೋಮವಾರ ಸಂಜೆ 4 ಗಂಟೆಗೆ ಖಾಝಿ ಝನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಸ್ಥಾನ ವಸ್ತ್ರ ವಿತರಣೆ ನಡೆಯಲಿದೆ ಮಗ್ರಿಬ್ ನಮಾಜಿನ ಬಳಿಕ ಸಂಸ್ಥೆಯ ಅಧ್ಯಕ್ಷರು ವಾಲೆಮುಂಡೋವ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಲಿದ್ದಾರೆ. ಸನದುದಾನ ಮತ್ತು ಸನದುದಾನ ಪ್ರಭಾಷಣಕ್ಕೆ ಇಂಡಿಯನ್ ಗ್ರಾಂಡ್ ಮುಪ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದು, ನೂರಾರು ಉಲಮಾ, ಉಮರಾ, ಸಾದಾತ್ ನಾಯಕರು ಭಾಗಿಯಾಗುವ ಸಮಾರಂಭದಲ್ಲಿ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಸ್ವಾಗತ ಸಮಿತಿ ಚಯರ್ ಮ್ಯಾನ್ ಹಾಜಿ ಎನ್ ಸುಲೈಮಾನ್ ಸಿಂಗಾರಿ, ಆಡಳಿತ ಸಮಿತಿ ಪದಾಧಿಕಾರಿ ಅಬ್ದುಲ್ ರಶೀದ್ ಹನೀಫಿ, ದಾರುಲ್ ಅಶ್ ಅರಿಯ್ಯ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹಮ್ಮದ್ ಶಫೀಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!