ನೀರಿನ ಟ್ಯಾಂಕ್‌ನಲ್ಲಿ ಯುವತಿಯ ಮೃತದೇಹ ಪತ್ತೆ
ಗದಗ : ಆಕೆಗೆ ಮದುವೆಯಾಗಿ ಕೇವಲ 5 ವರ್ಷವಾಗಿತ್ತಷ್ಟೆ. ದುರಂತ ಅಂದ್ರೆ, ಅವಳ ಶವ ನೀರಿನ ಸಂಪ್‌ನಲ್ಲಿ ಸಿಕ್ಕಿದೆ. ಈ ಘಟನೆ ನಡೆದಿರೋದು ಗದಗದ ಮದ್ದೂರು ಶಿವನಗರದಲ್ಲಿ.
24 ವರ್ಷದ ಪ್ರಿಯಾಂಕಾ ಲಮಾಣಿ ಮೃತಪಟ್ಟಿರುವ ವಿವಾಹಿತೆ. ಪತಿ ಮಹಾಂತೇಶ್ ಹನುಮಂತಪ್ಪ ಕುಟುಂಬಸ್ಥರು ಕೊಲೆ ಮಾಡಿ ನೀರಿನ ಟ್ಯಾಂಕ್‌ನಲ್ಲಿ ಬಿಸಾಕಿರುವುದಾಗಿ ಮೃತ ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಮಹಾಂತೇಶ್ ಹನುಮಂತಪ್ಪ ಕುಟುಂಬಸ್ಥರು ಕೊಲೆ ಮಾಡಿ ನೀರಿನ ಟ್ಯಾಂಕ್‌ನಲ್ಲಿ ಬಿಸಾಕಿರುವುದಾಗಿ ಮೃತ ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಿಯಾಂಕಾ ಹಾಗೂ ಮಹಾಂತೇಶ್ ಕೇವಲ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಗಂಡನ ಮನೆಯವರು ನಿತ್ಯ ವರದಕ್ಷಿಣಿ ಕಿರು*ಕುಳದ ಜೊತೆಗೆ ದೈಹಿಕವಾಗಿಯೂ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ.




