March 20, 2026

ವಿಟ್ಲ: ಅ.18 ಕೆಳಗಿನ ಬಾರೆಬೆಟ್ಟು ನವೀಕರಣಗೊಂಡ ನೂತನ ಮಸ್ಜಿದ್ ಮಾನಿವುಲ್ ಮನ್ಸೂರಿ ಲೋಕಾರ್ಪಣೆ ಸಮಾರಂಭ

0
image_editor_output_image324503284-1760602645027

ವಿಟ್ಲ: ಅನ್ಸಾರುಲ್ ಇಸ್ಲಾಂ ಮದರಸ(ರಿ) ಕೆಳಗಿನ ಬಾರೆಬೆಟ್ಟು ಕೊಳ್ನಾಡು ಗ್ರಾಮ ಇದರ ನವೀಕರಿಸಲ್ಪಟ್ಟ ಕಟ್ಟಡ ಹಾಗೂ ನೂತನ ಮಸ್ಜಿದ್ “ಮಸ್ಜಿದ್ ಮಾನಿವುಲ್ ಮನ್ಸೂರಿ” ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 18/10/2025ರಂದು ಶನಿವಾರ ಮದ್ಯಾಹ್ನ 12:15 ಕ್ಕೆ ಸರಿಯಾಗಿ ನಡೆಯಲಿದೆ.

ಸಮಾರಂಭದಲ್ಲಿ ಅರಬ್ ಸಂಯುಕ್ತ ಒಕ್ಕೂಟದ ಅಲ್ ಶೈಕ್ ಮಾನಿವುಲ್ ಮನ್ಸೂರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಮಸ್ಜಿದ್ ಉದ್ಘಾಟನೆ ನೆರವೇರಿಸಲಿದ್ದಾರೆ ಹಾಗೂ ಅಲ್ ಹಾಜ್ ಇಬ್ರಾಹಿಂ ಪೂಕುಂಞ ಕೋಯ ತಂಙಳ್ ಉದ್ಯಾವರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಮಾಜಿಕ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ನೂರುಲ್ ಹುದಾಯೂತ್ ಫೆಡರೇಷನ್ ಅಧ್ಯಕ್ಷ ಮೊಹಮ್ಮದ್ ಗಝಾಲಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!