March 20, 2026

ವಿಟ್ಲ: ಅಪ್ರಾಪ್ತನಿಗೆ ವಾಹನ ನೀಡಿದ ವಾಹನ ಮಾಲಕನಿಗೆ 32 ಸಾವಿರ ರೂ. ದಂಡ

0
IMG-20220615-WA0046

ವಿಟ್ಲ: ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಅಪಘಾತ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಅದರ ಮಾಲಕನಿಗೆ 32 ಸಾವಿರ ರೂ. ದಂಡ ವಿಧಿಸಲಾಗಿದೆ.

ಸೆ. ತಿಂಗಳಿನಲ್ಲಿ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ  ಅಪ್ರಾಪ್ತ ಬಾಲಕನು ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ  ಡಿಕ್ಕಿ ಹೊಡೆದು ಅಪಘಾತವಾಗಿತ್ತು. . ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

ಅಕ್ರ 74/2025 ಕಲಂ: U/s: 281,125(a) BNS and U/s: 4(1),181,146,196,199 A (1) , 190(2) IMV Act and U/s: 115CMV Rule ಪ್ರಕರಣಕ್ಕೆ ಸಂಬಂದಿಸಿದಂತೆ ಅಪ್ರಾಪ್ತ ಪ್ರಾಯದ ಬಾಲಕ KA-19-S-9666ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿ ಅಪಾಘಾತ ಪಡಿಸಿದ ಬಗ್ಗೆ ಮಾನ್ಯ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳದರವರ ಸಿಸಿ ನಂಬ್ರ:1766/2025 ರಂತೆ ವಿಚಾರಣೆ ಗೊಂಡು ದಿನಾಂಕ: 26.09.2025 ರಂದು ಆರೋಪಿ ವಾಹನದ ಆರ್ ಸಿ ಮಾಲಕರಾದ ಮಹಮ್ಮದ್ ಅನೀಸ್ ರವರಿಗೆ 32000 ರೂ, ದಂಡ ವಿಧಿಸಿರುವುದಾಗಿದೆ. ಅಪ್ರಾಪ್ತರಿಗೆ ವಾಹನ ನೀಡುವ ಮಾಲಕರಿಗೆ  ನ್ಯಾಯಾಲಯ ಸರಿಯಾದ ಪಾಠ ಕಲಿಸಿದೆ.

Leave a Reply

Your email address will not be published. Required fields are marked *

error: Content is protected !!