February 2, 2026

ಕಾಸರಗೋಡು: ಆತ್ಮಹತ್ಯೆಗೆ ಯತ್ನಿಸಿದ್ದ ನರ್ಸಿಂಗ್ ವಿದ್ಯಾರ್ಥಿನಿಯ ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಪಘಾತಕ್ಕೆ ಬಲಿ

0
image_editor_output_image-2044995898-1760597567486.jpg

ಕಾಸರಗೋಡು: ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಸಹೋದರ ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕಾರು ಅಪಘಾತಕ್ಕೀಡಾಗಿ ವಿಧ್ಯಾರ್ಥಿನಿ ಸಾವನಪ್ಪಿದ ಘಟನೆ ಕಾಸರಗೋಡಿನಲ್ಲಿ ಬುಧವಾರ ನಡೆದಿದೆ.

ಮೃತಳನ್ನು ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್‌ನ ನಿವಾಸಿ ವನಜಾ ಅವರ ಪುತ್ರಿ ಮಹಿಮಾ ಕೆ.ಸಿ (19) ಎಂದು ಗುರುತಿಸಲಾಗಿದೆ. ಈಕೆ ಕಾಸರಗೋಡಿನಲ್ಲಿ ಎರಡನೇ ವರ್ಷದ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ.

ಮಹಿಮಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ನೋಡಿದ ಆಕೆಯ ಅಣ್ಣ ಮಹೇಶ್ ಆಕೆಯನ್ನು ಇಳಿಸಿ ಸಂಬಂಧಿಕರ ಕಾರಿನಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಧ್ಯಾರ್ಥಿನಿಯ ಜೀವ ಉಳಿಸಲು ಕಾರನ್ನು ವೇಗವಾಗಿ ಓಡಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿ ಪಲ್ಟಿ ಹೊಡೆದಿದೆ.

ಈ ಅಪಘಾತದಲ್ಲಿ ಗಾಯಗೊಂಡ ಮಹಿಮಾ ಆಕೆಯ ಅಣ್ಣ ಮತ್ತು ತಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಈ ವೇಳೆ ಮಹಿಮಾ ಸಾವನಪ್ಪಿದ್ದಾರೆ. ಕಾರಿನ ಚಾಲಕ ಅಣ್ಣ ಮತ್ತು ಮಹಿಮಾ ತಾಯಿ ಸಣ್ಣಪುಟ್ಟಗಾಯಳಿಂದ ಪಾರಾಗಿದ್ದಾರೆ. ಮಹಿಮಾ ಅಪಘಾತದಿಂದ ಸಾವನಪ್ಪಿದ್ದಾರೋ ಅಥವಾ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ್ದಾರೋ ಎನ್ನುವುದು ಪೋಸ್ಟ್ ಮಾರ್ಟಂ ಮೂಲಕ ತಿಳಿದು ಬರಬೇಕಿದೆ.
ಮಹಿಮಾ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!