September 21, 2026

ವಿಟ್ಲ: ಅಶ್ಲೀಲ ಚಿತ್ರ ಹರಿಬಿಡುವುದಾಗಿ ಬೆದರಿಸಿ ಯುವತಿಯಿಂದ 10 ಪವನ್ ಚಿನ್ನ ಪಡೆದ ಆರೋಪ: ಪ್ರಕರಣ ದಾಖಲು

0
images

ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಯುವತಿಯ ಅಶ್ಲೀಲ ಚಿತ್ರಗಳನ್ನು ಇಟ್ಟುಕೊಂಡು ಬೆದರಿಸಿ ಸುಮಾರು ೧೦ ಪವನ್ ಚಿನ್ನಾಭರಣ ಲಪಟಾಯಿಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂಬಾತ ಜುಲೈ ನಲ್ಲಿ ತಿಂಗಳಿನಲ್ಲಿ ಇಸ್ಟಾಗ್ರಾಮ್ ನಲ್ಲಿ ಪರಿಚಿತನಾಗಿ ಮೇಸೆಜ್ ಮೂಲಕ ಯುವತಿಯ ಮೊಬೈಲ್ ಸಂಖ್ಯೆ ಪಡೆದು, ಅಶ್ಲೀಲ ಪೋಟೋಗಳನ್ನು ಹಾಕುವಂತೆ ಬೆದರಿಸಿದ್ದಾನೆ. ಚಿತ್ರವನ್ನು ಪಡೆದ ಬಳಿಕ ಯುವತಿಯ ಬಳಿಯಲ್ಲಿರುವ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಇಲ್ಲದೇ ಹೋದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತೆ ಹೆಸರಿದ್ದಾನೆನ್ನಲಾಗಿದೆ.

 

ಸ್ನೇಹಿತನೊಬ್ಬನನ್ನು ಯುವತಿ ಹಾಕಿದ ಲೊಕೇಶನ್ ಗೆ ಕಳುಹಿಸಿ ಚಿನ್ನಾಭರವಣನ್ನು ಪಡೆದುಕೊಂಡಿದ್ದಾನ್ನೆನ್ನಲಾಗಿದೆ. ಬಳಿಕ ಮತ್ತೆ ಚಿನ್ನ ಕೇಳಿದಾಗ ಯುವತಿ ಘಟನೆಯನ್ನು ಮನೆಯವರಿಗೆ ಹೇಳಿದ್ದು, ಅವರು ಆತನನ್ನು ಸಂಪರ್ಕಿಸಿದಾಗ ಎಲ್ಲವನ್ನೂ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಚಿನ್ನ ಹಿಂತಿರುಗಿಸದೆ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!