March 20, 2026

ಖಾಸಗಿ ಬಸ್ ಗೆ ಆಕಸ್ಮಿಕ ಬೆಂಕಿ: 20 ಮಂದಿ ಸಜೀವ ದಹನ

0
image_editor_output_image856145629-1760508320967.jpg

ಖಾಸಗಿ ಬಸ್ ಗೆ ಆಕಸ್ಮಿಕ ಬೆಂಕಿ ಹೊತ್ತಿಗೊಂಡ ಪರಿಣಾಮ ಸುಮಾರು 20 ಪ್ರಯಾಣಿಕರು ಸಜೀವ ದಹನವಾದ ಘಟನೆ ಜೈಪುರದ ಎಸ್‌ಎಂಎಸ್ ಆಸ್ಪತ್ರೆ ಸಮೀಪದಲ್ಲಿ ಸಂಭವಿಸಿದೆ.
ಬಸ್ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊರಟಿದ್ದು, ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

57 ಪ್ರಯಾಣಿಕರಿದ್ದ ಬಸ್‌, ಮಧ್ಯಾಹ್ನ 3ರ ಸುಮಾರಿಗೆ ಜೈಸಲ್ಮೇರ್‌ನಿಂದ ಹೊರಟಿದೆ. ದಾರಿ ಮಧ್ಯೆ ಬಸ್‌ನ ಹಿಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‌ಅನ್ನು ರಸ್ತೆ ಪಕ್ಕ ನಿಲ್ಲಿಸಲು ಚಾಲಕ ಮುಂದಾಗುತ್ತಿದ್ದ ವೇಳೆಯೇ, ಬೆಂಕಿಯು ಇಡೀ ಬಸ್‌ಗೆ ವ್ಯಾಪಿಸಿಕೊಂಡಿದೆ. ಜೈಸಲ್ಮೇರ್‌ನಿಂದ ಹೊರಟ 10 ನಿಮಿಷಗಳ ಬಳಿಕ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 19 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರೆ, ಅಸ್ವಸ್ಥಗೊಂಡಿದ್ದ ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!