March 20, 2026

ಪುತ್ತೂರು: ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ

0
IMG-20251014-WA0004.jpg

ಪುತ್ತೂರು: ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಪ್ರವೀಣ್ (27) ಸಿಟಿ ಗುಡ್ಡೆ ಮನೆ, ಕಬಕ ಗ್ರಾಮ ಪುತ್ತೂರು ತಾಲೂಕು ಎಂಬಾತನನ್ನು ಪತ್ತೆಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಫಿರ್ಯಾಧಿದಾರರಾದ ಶ್ರೀಮತಿ ರೇವತಿ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ:12.10.2025 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 05-00 ಗಂಟೆಯ ಮಧ್ಯಾವದಿಯಲ್ಲಿ ತನ್ನ ವಾಸದ ಮನೆಯಿಂದ ಯಾರೋ ಕಳ್ಳರು ಚಿನ್ನದ ಬಳೆ-01, ಕಿವಿಯೋಲೆ-01 ಜೊತೆ, ಚಿನ್ನದ ಸರ-01 ಹಾಗೂ ನಗದು ಹಣ ಕಳುವಾದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 89/2025 ಕಲಂ:331 (3), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ವಶಕ್ಕೆ ಪಡೆದು ಕಳವು ಮಾಡಿದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಾಲಾಗಿದೆ.

ಆರೊಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Leave a Reply

Your email address will not be published. Required fields are marked *

error: Content is protected !!