ಗಾಝಾದಲ್ಲಿ ಕದನ ವಿರಾಮದ ನಡುವೆ, ಫೆಲೆಸ್ತೀನ್‌ನ ಖ್ಯಾತ ಪತ್ರಕರ್ತನ ಗುಂಡಿಕ್ಕಿ ಹತ್ಯೆ
ಗಾಝಾದಲ್ಲಿ ಕದನ ವಿರಾಮ ಜಾರಿಯಾಗುತ್ತಿರುವ ನಡುವೆ, ಪ್ಯಾಲೆಸ್ತೀನ್‌ನ ಪ್ರಮುಖ ಪತ್ರಕರ್ತ ಸಾಲೇಹ್ ಅಲ್-ಜಾಫರಾವಿ ಅವರನ್ನು ಶಸ್ತ್ರದಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಯುದ್ಧದ ವರದಿ ಮಾಡುವ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ 28 ವರ್ಷದ ಜಾಫರಾವಿ ಅವರನ್ನು, ಗಾಝಾ ನಗರದ ಸಬ್ರಾ ಸಮೀಪ ನಡೆದ ಘರ್ಷಣೆಗಳ ವರದಿ ಮಾಡುವಾಗ ಸಶಸ್ತ್ರ ಗುಂಪಿನ ಸದಸ್ಯ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ತನ್ನ ಸನದ್ ಏಜೆನ್ಸಿಯು ಕೆಲವು ವರದಿಗಾರರು ಮತ್ತು ಹೋರಾಟಗಾರರು ಹಂಚಿಕೊಂಡಿರುವ ವಿಡಿಯೋಗಳನ್ನು ಪರಿಶೀಲಿಸಿದೆ. ಆ ವಿಡಿಯೋದಲ್ಲಿ ‘ಪ್ರೆಸ್’ ಎಂದು ಬರೆದ ಜಾಕೆಟ್ ಧರಿಸಿರುವ ಒಬ್ಬರು ವ್ಯಕ್ತಿಯ ದೇಹ ಟ್ರಕ್ ಒಂದರ ಹಿಂದೆ ಬಿದ್ದಿರುವುದು ಕಾಣಿಸಿದೆ. ಸಾಲೇಹ್ ಅಲ್-ಜಾಫರಾವಿ ಭಾನುವಾರ ಬೆಳಿಗ್ಗೆಯಿಂದ ಕಾಣಿಯಾಗಿದ್ದಾರೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ವಿವರಿಸಿದೆ.
ಸಬ್ರಾದಲ್ಲಿ ನಡೆದ ಘರ್ಷಣೆ ಇಸ್ರೇಲ್ ಬೆಂಬಲಿತ ಶಸಸ್ತ್ರ ಗುಂಪೊಂದಕ್ಕೆ ಸಂಬಂಧಿಸಿದೆ ಎಂದು ಗಾಝಾದ ಒಳಾಡಳಿತ ಸಚಿವಾಲಯದ ಮೂಲವೊಂದು ಹೇಳಿರುವುದಾಗಿ ಆಲ್- ಜಝೀರಾ ತಿಳಿಸಿದೆ.




