ಸುಳ್ಯ: ಅಬುಧಾಬಿಗೆ ತೆರಳಿದ್ದ ಯುವಕ ಕುಸಿದು ಬಿದ್ದು ಸಾವು
ಅಬುಧಾಬಿ : ಮೂರು ದಿನಗಳ ಹಿಂದೆಯಷ್ಟೇ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಅಬುಧಾಬಿಗೆ ತೆರಳಿದ್ದ ಮಂಡ್ಯ ಮೂಲದ ಯುವಕ ಕುಸಿದು ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ.
ಮಂಡ್ಯ ಮೂಲದ ಅಬೂಬಕ್ಕರ್ ಕುಸಿದು ಬಿದ್ದು ಮೃತಪಟ್ಟ ಯುವಕರಾಗಿದ್ದಾರೆ.
ಮೃತ ಅಬೂಬಕ್ಕರ್ ದಕ್ಷಿಣ ಕನ್ನಡದ ಸುಳ್ಯದ ಕಾವು ಸಮೀಪದ ಮಹಿಳೆಯನ್ನು ಮದುವೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೃತದೇಹವು ಅಬುಧಾಬಿಯ ಆಸ್ಪತ್ರೆಯಲ್ಲಿದ್ದು, ಕೆಸಿಎಫ್ ನಾಯಕರುಗಳು ಹಾಗೂ ಸಮಾಜ ಸೇವಕರು ಮೃತದೇಹದ ಅಂತಿಮ ಸಂಸ್ಕಾರಕ್ಕಾಗಿ ದಾಖಲೆಗಳ ತಯಾರಿ ಪ್ರಕ್ರಿಯೆಯಲ್ಲಿ ಕಾರ್ಯನಿರತರಾಗಿದ್ದು ಸ್ವದೇಶಕ್ಕೆ ತರಲು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.





