July 4, 2026

ಪತಿಯೊಂದಿಗೆ ಗಲಾಟೆ ಮಾಡಿ ಮನನೊಂದು ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ

0
image_editor_output_image-117434468-1759750758688.jpg

ಬೆಂಗಳೂರು: ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಲಗ್ಗೇರೆಯ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿದೆ.

ರಕ್ಷಿತಾ (26) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ರಕ್ಷಿತಾ ನಾಲ್ಕು ವರ್ಷದ ಹಿಂದೆ ರವೀಶ್‌ನನ್ನು ಮದುವೆಯಾಗಿದ್ದರು. ಕಳೆದ ಮೂರು ವರ್ಷದಿಂದ ರವೀಶ್ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ರವೀಶ್ ಜೊತೆ ಸಹೋದರ ಲೋಕೇಶ್ ಕೂಡ ರಕ್ಷಿತಾ ಜೊತೆ ಗಲಾಟೆ ಮಾಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲೋಕೇಶ್ ರವೀಶ್ ಮನೆಯಲ್ಲೇ ವಾಸವಾಗಿದ್ದ. ಭಾನುವಾರ ರಾತ್ರಿ ಕೂಡ ರಕ್ಷಿತಾ ಜೊತೆ ರವೀಶ್ ಹಾಗೂ ಲೋಕೇಶ್ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದು ರಕ್ಷಿತಾ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!