ವಿದ್ಯುತ್ ಶಾಕ್ ನಿಂದ ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯ ಮೃತ್ಯು
ರಿಯಾದ್ : ವಿದ್ಯುತ್ ಅಘಾತದಿಂದ ಭಾರತೀಯ ಮೂಲದ ವ್ಯಕ್ಕಿ ಸೌದಿ ಅರೇಬಿಯಾದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ಮೊಹಮ್ಮದ್ ಅಲಿ (36) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದಾಗ ಮೊಹಮ್ಮದ್ ಅಲಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶ ಉಂಟಾಗಿ ಸಾವನ್ನಪ್ಪಿದ್ದಾರೆ.
ಐಸಿಎಫ್ ಕಾರ್ಯಕರ್ತ ಮೊಹಮ್ಮದ್ ಅಲಿ ಮೂಲತಃ ಕೇರಳದ ಕೋಝಿಕ್ಕೋಡ್ ನ ಮುಕ್ಕಂ ತಾಲೂಕಿನ ವಲಿಯಪರಂಬ ನಿವಾಸಿಯಾಗಿದ್ದಾರೆ.
ಮೃತರು ತಂದೆ ಅಬ್ದುರಹ್ಮಾನ್, ತಾಯಿ ಆಯೇಷಾ, ಪತ್ನಿ ಫಾತಿಮಾ ಜುಮಾನಾ ಮತ್ತು ಪುತ್ರಿ ಫಾತಿಮಾ ಹಬೀಬಾ ಅವರನ್ನು ಅಗಲಿದ್ದಾರೆ.





