March 13, 2026

ಎಸ್ಐಟಿಯಿಂದ ಧರ್ಮಸ್ಥಳ ಗ್ರಾಮ ಪಂಚಾಯತ್ ನ 4 ಮಂದಿ ಮಾಜಿ ಅಧ್ಯಕ್ಷರ ವಿಚಾರಣೆ

0
image_editor_output_image-1828447247-1759148907546.jpg

ಬೆಳ್ತಂಗಡಿ ಸೆಪ್ಟೆಂಬರ್ 29: ಧರ್ಮಸ್ಥಳ ಅನಧಿಕೃತ ಶವ ಹೂತ ಪ್ರಕರಣಗಳ ಸಂಬಂಧ, ಎಸ್ ಐಟಿ ವಿಚಾರಣೆ ಮುಂದುವರಿದಿದ್ದು, ಅಧಿಕಾರಿಗಳು ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ನೋಟಿಸ್ ನೀಡಿದ್ದು ಇಂದು ಬೆಳಗ್ಗೆಯೇ ವಿಚಾರಣೆಗೆ ಹಾಜರಾಗಿದ್ದಾರೆ.

ಮಾಜಿ ಅಧ್ಯಕ್ಷರಾದ ಕೇಶವ್ ಬೆಳಾಲ್, ಪ್ರಭಾಕರ ಪೂಜಾರಿ, ಗೀತಾ ಹಾಗೂ ಚಂದನ್ ಕಾಮತ್ ವಿಚಾರಣೆಗೆ ಹಾಜರಾಗಿದ್ದಾರೆ.ಯುಡಿಆರ್ ಪ್ರಕರಣಗಳಲ್ಲಿ ಶವ ಹೂತ ಕೇಸ್ ಗಳಿಗೆ ಬಿಲ್ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತನಿಖೆಗಾಗಿ ಕರೆಸಲಾಗಿದೆ. ಈ ಹಿಮದೆಯೂ ಧರ್ಮಸ್ಥಳ ಗ್ರಾಮ ಪಂಚಾಯತ್ ಸಿಬ್ಬಂದಿಗಳ ವಿಚಾರಣೆ, ದಾಖಲೆಗಳ ಪರಿಶೀಲನೆಯನ್ನು ಎಸ್‌ಐಟಿ ನಡೆಸಿತ್ತು.
ಇನ್ನು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ವಿಚಾರಣೆಗೆ ಇನ್ನೂ ಮಹೇಶ್ ಶೆಟ್ಟಿ ತಿಮರೋಡಿ ಹಾಜರಾಗಿಲ್ಲ. ಅಲ್ಲದೆ ಗಡಿಪಾರು ನೋಟಿಸ್ ಅನ್ನು ಕೂಡ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನೀಡಲಾಗಿಲ್ಲ. ತಲೆ ಮರೆಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸರು 2 ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!