August 6, 2026

ರಸ್ತೆ ಗುಂಡಿಗೆ ಬಿದ್ದ ಸ್ಕೂಟರ್: ಬಿ.ಕಾಂ ವಿದ್ಯಾರ್ಥಿನಿ ಸಾವು

0
image_editor_output_image339849807-1759143962683.jpg

ಬೆಂಗಳೂರು: ರಸ್ತೆ ಗುಂಡಿಗಳನ್ನ ಮುಚ್ಚುವ ಬಗ್ಗೆ ಸಿಎಂ ಡಿಸಿಎಂ ತಾಕೀತು ಮಾಡಿದ್ರೂ ಇನ್ನೂ ರಸ್ತೆಗಳಲ್ಲಿ ಗುಂಡಿಗಳು ಮಾಯವಾಗಿಲ್ಲ. ಇದೀಗ ಬೆಂಗಳೂರು ಹೊರ ವಲಯದಲ್ಲಿ ರಸ್ತೆ ಗುಂಡಿಗೆ ಪದವೀಧರೆ ಬಲಿಯಾಗಿದ್ದಾಳೆ.

ಧನುಶ್ರೀ (21) ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ ಪದವೀಧರೆ ಇಂದು ಬೆಳಗ್ಗೆ ಬೂದಿಗೆರೆ ಕ್ರಾಸ್ ಬಳಿ ಬೆಳಗ್ಗೆ 8.50ರ ಸುಮಾರಿಗೆ ಸ್ಕೂಟರ್ ನಲ್ಲಿ ಬರ್ತಿದ್ದಾಗ ರಸ್ತೆಗುಂಡಿಗೆ ಬಿದ್ದು ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾಳೆ.

ಗುಂಡಿಯಿಂದ ಸ್ಕಿಡ್ ಆಗಿ ಬಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!