March 20, 2026

ವಿಟ್ಲ: ನೀರಕ್ಕಣಿ ಮದರಸ,ಮಿಲಾದ್ ಫೆಸ್ಟ್.

0
IMG-20250917-WA0000

ವಿಟ್ಲ: ಇಲ್ಲಿಗೆ ಸಮೀಪದ ನೀರಕ್ಕಣಿ ಸಿರಾಜುಲ್ ಹುದಾ ಮದರಸದಲ್ಲಿ ಮಿಲಾದ್ ಫೆಸ್ಟ್ 2015 ಅಧ್ಯಕ್ಷ ಅಬ್ದುಲ್ಲಾ ಕೋಡಪದವು‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಹಾಡು,ಕ್ವಿಝ್,ಭಾಷಣ ,ಕವಾಲಿ,ಬುರ್ದಾ ಮುಂತಾದ ಕಾರ್ಯಕ್ರಮಗಳು ನಡೆದುವು.


ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಆರಿಫ್ ಬಾಖವಿ ಪ್ರವಾದಿ ಸಂದೇಶ ನೀಡಿದರು.


   ವೇದಿಕೆಯಲ್ಲಿ ಮದರಸದ ಗೌರವಾಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ,ವಿಟ್ಲ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಶಾಫಿ ಗಮಿ,,ಮೊಯ್ದೀನ್ ಹಾಜಿ,ಅಬೂಬಕರ್ ಹಾಜಿ ಗಮಿ ಮುಂತಾದವರು ಉಪಸ್ಥಿತರಿದ್ದರು


   ಸದರ್  ಎ.ಆರ್.ಇಸ್ಮಾಯಿಲ್ ಮದನಿ  ಸ್ವಾಗತಿಸಿದರು.
  ಗಫೂರ್ ಹನೀಫಿ ಅಲ್ ಫಾಝಿಲ್ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!