ಕಲ್ಲಡ್ಕ: ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ರುದ್ರೇಶ್ ಪೆರ್ನೆ:
ಬಂಟ್ವಾಳ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸೊಂದನ್ನು ಅದರ ವಾರೀಸುದಾರಿಗೆ ನೀಡುವ ಮೂಲಕ ರಿಕ್ಷಾ ಚಾಲಕ ಪ್ರಾಮಾಣಿಕತೆ ಮೆರೆದ ಘಟನೆ ಶುಕ್ರವಾರ ಕಲ್ಲಡ್ಕದಲ್ಲಿ ನಡೆದಿದೆ.
ಹಿಂದೊಮ್ಮೆ ಕೋಮುಗಲಭೆಗೆ ಹೆಸರುವಾಸಿಯಾಗಿದ್ದ ಕಲ್ಲಡ್ಕದಲ್ಲಿ ಹಿಂದು ಯುವಕ, ಮುಸ್ಲಿಂ ಯುವಕನ ಪರ್ಸನ್ನು ಕಲ್ಲಡ್ಕದ ಮಸೀದಿ ಬಳಿ ನೀಡಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆಯ ಸತ್ಯಶ್ರೀ ಕ್ಯಾಟರಿಂಗ್ ಮತ್ತು ಮಾತೃಶ್ರೀ ಕ್ಯಾಟರಿಂಗ್ ನ ಮಾಲೀಕರ ಸಹೋದರ, ರಿಕ್ಷಾ ಚಾಲಕ ರುದ್ರೇಶ್ ಪೆರ್ನೆ ಕಾರ್ಯ ನಿಮಿತ್ತ ಕಲ್ಲಡ್ಕಕ್ಕೆ ಬಂದಿದ್ದು ಆತನಿಗೆ ಕಲ್ಲಡ್ಕ ಸರ್ವಿಸ್ ರಸ್ತೆಯಲ್ಲಿ ವಿವಿಧ ದಾಖಲೆ ಮತ್ತು ನಗದು ಇದ್ದ ಪರ್ಸ್ ಬಿದ್ದು ಸಿಕ್ಕಿತ್ತು. ಇದು ಪಾಣೆಮಂಗಳೂರು – ಮೆಲ್ಕಾರ್ ನ ಭಗವತಿ ಸ್ಟೀಲ್ಸ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ಹಫೀಜ್ ಎಂಬವರಿಗೆ ಸೇರಿದ್ದಾಗಿತ್ತು. ಪರ್ಸ್ ನಲ್ಲಿ ದೊರೆತ ಮಾಹಿತಿಯಂತೆ ದೂರವಾಣಿ ಮೂಲಕ ಸಂಪರ್ಕಿಸಿ ಅವರನ್ನು ಕಲ್ಲಡ್ಕ ಮಸೀದಿ ಬಳಿಗೆ ಕರೆಯಿಸಿಕೊಂಡು ಅವರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಮೂಲಕ ರುದ್ರೇಶ್ ಪೆರ್ನೆ ಅವರು ಪ್ರಾಮಾಣಿಕತೆ ಮೆರೆದು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.




