February 2, 2026

SBI ಬ್ಯಾಂಕ್ ದರೋಡೆ: 8 ಕೋಟಿ ನಗದು‌, 50 ಕೆಜೆ ಚಿನ್ನಭಾರಣ ದೋಚಿ ಪರಾರಿ

0
image_editor_output_image-488567175-1758045684243.jpg

ವಿಜಯಪುರ : ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಕಂಟ್ರಿ ಪಿತ್ತೂಲು, ಮಾರಕಾಸ್ತ್ರಗಳನ್ನು ತೋರಿಸಿ ಸಿಬ್ಬಂದಿಗಳನ್ನು ಹೆದರಿಸಿ, ಸಿನಿ ಶೈಲಿಯಲ್ಲಿ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಚಡಚಣ ಪಟ್ಟಣದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಮಿಲಿಟರಿ ಡ್ರೆಸ್ ನಲ್ಲಿ ಬ್ಯಾಂಕ್ ಪ್ರವೇಶ ಮಾಡಿರುವ ದರೋಡೆಕೋರರು ಮುಖಕ್ಕೆ ಮಾಸ್ಕ್ ಧರಿಸಿ ಕಂಟ್ರಿ ಪಿತ್ತೂಲು, ಮಾರಕಾಸ್ತ್ರಗಳನ್ನು ತೋರಿಸಿ ಸಿಬ್ಬಂದಿಗಳನ್ನು ಹೆದರಿಸಿದ್ದಾರೆ.‌
ನಂತರ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಸಿಬ್ಬಂದಿಗಳನ್ನು ಹಿಡಿದು ಕೈಕಾಲು ಕಟ್ಟಿಹಾಕಿ ಬ್ಯಾಂಕ್ ನಲ್ಲಿದ ಸುಮಾರು ೮ ಕೋಟಿ ನಗದು‌ ಹಾಗೂ ೫೦ ಕೆಜೆ ಚಿನ್ನಭಾರಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಸಿಬ್ಬಂದಿ ಹಾಗೂ ಪೊಲೀಸ್ ಮೂಲದಿಂದ ಮಾಹಿತಿ ಸಿಕ್ಕಿದೆ.‌ ಆದರೆ ನಿಖರವಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.‌
ಈ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಬ್ಯಾಂಕ್ ಎದುರಿಗೆ ಸ್ಥಳೀಯರು ಜಮಾಯಿಸಿದ್ದಾರೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!