ಮಂಗಳೂರು: ಕೂಳೂರು ಫ್ಲೈ ಓವರ್ ಕೆಳಗೆ ನಿಲ್ಲಿಸಿದ್ದ KTM 250 ಡ್ಯೂಕ್ ಬೈಕ್ ಕಳವು
ಮಂಗಳೂರು: ಕೂಳೂರು ಫ್ಲೈ ಓವರ್ ಕೆಳಗೆ ನಿಲ್ಲಿಸಿದ್ದ ಕೆಎ 05 ಎಲ್‌ಟಿ 4855 ನೋಂದಣಿಯ ಕೆಟಿಎಂ 250 ಡ್ನೂಕ್ ಬೈಕ್ ಕಳವಾಗಿದೆ.
ಅಜಯ್ ಜೆ.ಎಸ್. ಅವರು ತನ್ನ ಸ್ನೇಹಿತ ನಿಶ್ಚಿತ್ ಅವರ ಬೈಕ್‌ನಲ್ಲಿ ಬಂದು ಆ. 30ರಂದು ಸಂಜೆ ಕೂಳೂರು ಫ್ಲೈ ಓವರ್ ಕೆಳಭಾಗದಲ್ಲಿ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮಂತ್ರಾಲಯಕ್ಕೆ ಹೋಗಿದ್ದರು. ಸೆ. 1ರಂದು ಬೆಳಗ್ಗೆ 8.30ಕ್ಕೆ ಮರಳಿ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಕಳವಾದ ಬೈಕ್‌ನ ಮೌಲ್ಯ ಸುಮಾರು 2 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




