March 15, 2026

ಸುಳ್ಯ: ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಢಿಕ್ಕಿ: 20ಕ್ಕೂ ಅಧಿಕ ಮಂದಿಗೆ ಗಾಯ

0
image_editor_output_image-227066961-1757056726471.jpg

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ತಾಲೂಕಿನ ಅಡಾರು ಬಳಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.

ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್‌ ಹಾಗೂ ಸುಳ್ಯದಿಂದ ಪುತ್ತೂರಿನ ಕಡೆಗೆ ಹೋಗುತ್ತಿದ್ದ ಬಸ್‌ನ ನಡುವೆ ಅಡಾRರು ಬಸ್‌ ತಂಗುದಾಣದ ಸಮೀಪ ಅಪಘಾತ ಸಂಭವಿಸಿದೆ. ಹೆಚ್ಚಿನ ಪ್ರಯಾಣಿಕರ ಮುಖದ ಭಾಗಕ್ಕೆ ಮತ್ತು ಎದೆ ಭಾಗಕ್ಕೆ ಗುದ್ದಿದ ಗಾಯವಾಗಿದೆ.

ದೊಡ್ಡತೋಟ ನಿವಾಸಿ ಮೇಘನಾ, ಪೆರಾಜೆಯ ಬಾಲಚಂದ್ರ ಹಾಗೂ ಪುಂಡರಿಕ, ಜುಬೈದಾ, ರವೀಂದ್ರ ಇರ್ದೆ, ಮಡಿಕೇರಿಯ ವಿದ್ಯಾ, ಕಲ್ಲುಗುಂಡಿಯ ಅನುರಾಧಾ, ಹಳೇಗೇಟು ನಿವಾಸಿ ಲಲಿತಾ ಗಂಭೀರ ಗಾಯಗೊಂಡವರು. ಇನ್ನೂ ಹಲವು ಮಂದಿಗೆ ಸಣ್ಣ-ಪುಟ್ಟ ಗಾಯವಾಗಿದೆ.

ಎರಡೂ ಬಸ್‌ಗಳು ಜಖಂಗೊಂಡಿವೆ. ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಗಳು ಆರೋಗ್ಯ ವಿಚಾರಿಸಿದರು. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!