ವಿಟ್ಲ: ಕೇಂದ್ರ ಜುಮಾ ಮಸೀದಿ, ಈದ್ ಮಿಲಾದ್
ವಿಟ್ಲ: ವಿಶ್ವ ಪ್ರವಾದಿ ಮಹಮ್ಮದ್ (ಸ.ಅ) ರವರ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಖತೀಬ್ ಆರಿಫ್ ಬಾಖವಿ ಮೌಲೂದ್ ಗೆ ನೇತೃತ್ವ ನೀಡಿದರು.
ಮದರಸ ವಿದ್ಯಾರ್ಥಿಗಳಿಂದ ಹಾಡು, ವಿವಿಧ ಸ್ಪರ್ಧೆ ಗಳು ನಡೆದವು.
ಮಸೀದಿ ಉಪಾಧ್ಯಕ್ಷ ಮಹಮ್ಮದ್ ಗಮಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಮದರಸ ಅಧ್ಯಕ್ಷ ಶಮೀರ್ ಪಳಿಕೆ, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಇಸ್ಮಾಯಿಲ್ ಪರ್ತಿಪ್ಪಾಡಿ, ಯೂಸುಫ್ ಗಮಿ ಮುಂತಾದವರು ಪಾಲ್ಗೊಂಡಿದ್ದರು.




