ಬುಡೋಳಿ ಮುನೀರುಲ್ ಇಸ್ಲಾಂ ಮದ್ರಸ ವತಿಯಿಂದ ಬೃಹತ್ ಮೀಲಾದ್ ಜಾಥಾ
ಬಂಟ್ವಾಳ: ಬುಡೋಳಿ ಮುನೀರುಲ್ ಇಸ್ಲಾಂ ಮದ್ರಸ ವತಿಯಿಂದ ಬೃಹತ್ ಮೀಲಾದ್ ಜಾಥಾ ನಡೆಯಿತು.
ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸತ್ತಿಕಲ್ಲು ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬರಾದ ಅಬ್ದುಲ್ ಮಜೀದ್ ದಾರಿಮಿ ದುವಾ ನೆರವೇರಿಸಿದರು. ಸದರ್ ಉಸ್ತಾದ್ ಇಬ್ರಾಹಿಂ ಫಾಝಿಲ್ ಹನೀಫಿ, ಅಲ್ತಾಫ್ ದಾರಿಮಿ, ಪ್ರಮುಖರಾದ ಅದ್ರಾಮ, ಅಲ್ತಾಫ್, ಸಂಶೀರ್, ಬಾಸಿತ್, ಕಲಂದರ್, ಮತ್ತಿತರರು ಉಪಸ್ಥಿತರಿದ್ದರು.




