March 13, 2026

ಶಿರಸಿ: ತಮ್ಮನ ಕೈಯಲ್ಲಿದ್ದ ಏರ್ ಗನ್ ನಿಂದ ಗುಂಡು ಸಿಡಿದು ಅಣ್ಣ ಸಾವು

0
image_editor_output_image-1527018165-1757082621385.jpg

ಶಿರಸಿ: ಅಣ್ಣ ಮತ್ತು ತಮ್ಮ ಏರ್ ಗನ್ ನಿಂದ ಆಟ ಆಡುತ್ತಿರುವ ವೇಳೆ ಆಕಸ್ಮಿಕವಾಗಿ ಏರ್ ಗನ್ ನಿಂದ ಸಿಡಿದ ಗುಂಡು ಬಾಲಕನೊಬ್ಬನ ಬಲಿ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌

ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಅವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಣ್ಣ – ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇದರಿಂದ ಅಣ್ಣ ಕರಿಯಪ್ಪ (9) ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತ ಬಾಲಕ ಕುಟುಂಬವು ಹಾವೇರಿ ಮೂಲದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!