August 6, 2026

ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಅರೆಸ್ಟ್ ಮಾಡಿದ್ದು ಒಳ್ಳೆದಾಯಿತು: ಗಿರೀಶ್‌ ಮಟ್ಟಣ್ಣನವರ್‌

0
image_editor_output_image386276718-1755942842597.jpg

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ನ್ನು ಬಂಧಿಸಿದ್ದೇ ಒಳ್ಳೆದಾಯಿತು ಆತನಿಗೆ ನಾರ್ಕೋ ಆನಾಲಿಸಿಸ್‌ ಪರೀಕ್ಷೆ ಮಾಡಬೇಕು ಎಂದು ಗಿರೀಶ್‌ ಮಟ್ಟಣ್ಣನವರ್‌ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಷಡ್ಯಂತ್ರ ಏನೇ ಇದ್ದರೂ ಎಸ್‌ಐಟಿಯವರೇ ಉತ್ತರ ಕೊಡುತ್ತಾರೆ. ಅರೆಸ್ಟ್‌ ಆಗಿದ್ದು ಒಳ್ಳೆಯ ಬೆಳವಣಿಗೆ. ಎಸ್‌ಐಟಿ ಕರೆದರೆ ನನಗೆ ಮತ್ತು ಆತನಿಗೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದರು.

ಸುಜಾತ ಭಟ್‌ ಅವರು ಅವರಿಗೆ ಆಗಿರುವ ಅನ್ಯಾಯವನ್ನು ಮೊದಲ ಬಾರಿಗೆ ಹೇಳಿದ್ದಾರೆ. ಯಾಕೆ ಮಾಧ್ಯಮಗಳು ಈ ವಿಚಾರವನ್ನು ಪ್ರಶ್ನೆ ಮಾಡುತ್ತಿಲ್ಲ. ಅರ್ಧ ಸತ್ಯವನ್ನು ಮಾತ್ರ ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!