September 21, 2026

ಮಂಗಳೂರು: 200 ಮೀಟರ್ ಎತ್ತರದ ‘ಮಂಗಳೂರು ಐ’ಗೆ ಸರಕಾರ ಒಪ್ಪಿಗೆ

0
image_editor_output_image1262514866-1789968724691

ಮಂಗಳೂರು: ಕರಾವಳಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವ ಮಹತ್ವದ ಯೋಜನೆಗೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಮಂಗಳೂರಿನಲ್ಲಿ 200 ಮೀಟರ್ ಎತ್ತರದ ‘ಮಂಗಳೂರು ಐ’ ವಾಣಿಜ್ಯ ಸಂಕೀರ್ಣ ಮತ್ತು ಗಗನಚುಂಬಿ ಕಟ್ಟಡ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ.

ಮಹತ್ವಾಕಾಂಕ್ಷೆಯ ಈ ಮೂಲಸೌಕರ್ಯ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ, ಕಾರ್ಯಸಾಧ್ಯತಾ ಅಂತರ ನಿಧಿ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ರೂಪುಗೊಳ್ಳಲಿರುವ ‘ಮಂಗಳೂರು ಐ’ನಲ್ಲಿ ಮೂರು ಸಮುದಾಯ ಭವನಗಳು ಹಾಗೂ ಸುತ್ತುತ್ತಿರುವ ರೆಸ್ಟೋರೆಂಟ್‌ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.

ಇದರ ಪ್ರಮುಖ ಆಕರ್ಷಣೆಯಾಗಿರುವ ಎರಡು ಅಂತಸ್ತಿನ ವೀಕ್ಷಣಾ ಗ್ಯಾಲರಿಯಿಂದ ಮಂಗಳೂರು ನಗರ, ಕರಾವಳಿ ಪ್ರದೇಶ ಹಾಗೂ ಅರಬ್ಬಿ ಸಮುದ್ರದ 360 ಡಿಗ್ರಿ ವಿಹಂಗಮ ನೋಟವನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ದೊರೆಯಲಿದೆ. ಈ ಯೋಜನೆಯು ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಜೊತೆಗೆ, ನಗರದಲ್ಲಿ ಮತ್ತೊಂದು ಪ್ರಮುಖ ಪ್ರವಾಸಿ ಹೆಗ್ಗುರುತಾಗಿ ‘ಮಂಗಳೂರು ಐ’ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.

 

Leave a Reply

Your email address will not be published. Required fields are marked *

error: Content is protected !!