ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆಯಲ್ಲಿ ಹೆದ್ದಾರಿ ಬಿದ್ದ ಮರ:
ವಿಟ್ಲ : ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ರಸ್ತೆಯ ಮೇಲೆ ತುಂಬಾ ಹಳೆಯದಾದ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.
ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ವಾಹನಗಳು ಸಂಚಾರವಿಲ್ಲದ ಸಮಯದಲ್ಲಿ ಮರ ಬಿದ್ದಿರುವುದರಿಂದ ಅಪಾಯ ತಪ್ಪಿದೆ.
ರಜೆಯಾದ ಕಾರಣ ವಾಹನಗಳ ಓಡಾಟ ತುಸು ಕಡಿಮೆಯಿತ್ತು. ಆದರೂ ಮರ ಬೀಳುವ ಸ್ವಲ್ಪವೇ ಮೊದಲು ಲಾರಿ ಸಹಿತ ಘನವಾಹನಗಳು ಮುಂದೆ ಹೋಗಿದ್ದ ನ್ನು ಸ್ಥಳೀಯರು ನೆನೆಸುತ್ತಾರೆ.
ಸಂಚಾರ ಅಡಚಣೆಯಾಗಿರುವ ಹಿನ್ನಲೆಯಲ್ಲಿ ಸಂಚಾರಮುಕ್ತ ಮಾಡಲು ಸ್ಥಳೀಯರು ಮರಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.




