ಕನ್ಯಾನ: ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಸಡಗರ ಸಂಭ್ರಮದ ಸ್ವಾತಂತ್ರ ದಿನಾಚರಣೆ
ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೀವ ತ್ಯಜಿಸಿ,ಆಸ್ತಿ ಪಾಸ್ತಿ ಗಳನ್ನು ತೊರೆದು, ನಾಶ ನಷ್ಟ್ರಗಳನ್ನು ಅನುಭವಿಸಿ ಲಕ್ಷೋಪ ಲಕ್ಷ ಸ್ವಾತಂತ್ರ್ಯ ಸೇನಾನಿಗಳು ವೀರ ಮೃತ್ಯುವನ್ನರಿಸಿ 1947ನೇ ಆಗಸ್ಟ್ 15ರಂದು ನಮಗೆ ಸಿಕ್ಕಿದ ಸ್ವತಂತ್ರ ಸುಂದರ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕನ್ಯಾನ ಬಂಡಿತ್ತಡ್ಕ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ನಲ್ಲಿ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
2025 ನೇ ಆಗಸ್ಟ್ 15 ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕನ್ಯಾನ ರಹ್ಮಾನಿಯಾ ಜಮಾ ಮಸ್ಜಿದ್ ಧರ್ಮ ಗುರುಗಳಾದ ಇಬ್ರಾಹಿಂ ಫೈಝಿ ಉಸ್ತಾದ್, ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆಪಿ ಅಬ್ದುಲ್ ರಹಿಮಾನ್, ಜಮಾಅತ್ ಪ್ರೆಸಿಡೆಂಟ್ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ, ಜಮಾಅತ್ ಪ್ರ.ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ, ಕೋಶಾದಿಕಾರಿ ಇದ್ದಿನಬ್ಬ ನೆಕ್ಲಾಜೆ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ.ಕೆ ಮುಹಮ್ಮದ್ ಕುಂಞ ಗೋಳಿಕಟ್ಟೆ, ಕನ್ಯಾನ ರಹ್ಮಾನಿಯಾ ಜಮಾಅತ್ ಕಮಿಟಿ ಪದಾದಿಕಾರಿಗಳು ಮತ್ತು ಇತರರು ಭಾಗವಹಿಸಿದರು.
ಸಾಮಾಜಿಕ ಕಾರ್ಯಕರ್ತ ಜಿ.ಕೆ ರಹೀಂ ಗೋಳಿಕಟ್ಟೆ ಸ್ವಾತಂತ್ರ್ಯ ಭಾಷಣಗೈದರು.
ಅದೇ ಸಂದರ್ಭದಲ್ಲಿ ಕನ್ಯಾನ ಮುಸ್ಲಿಂ ಸೇವಾ ಚಾರಿಟೇಬಲ್ ಟ್ರಸ್ಟ್ ಉದಾರವಾಗಿ ನಿರ್ಮಿಸಿ ನೀಡಿದ ಧ್ವಜ ಸ್ಥಂಭವನ್ನು ಉದ್ಘಾಟಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ವಂದನಾ ಸ್ವೀಕಾರ ಹಾಗೂ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.
ಶಾಲಾ ಮುಖ್ಯೋ ಪಾಧ್ಯಾಯನಿ ಲವಿನಾ ಮೊಂತೇರೊ ಸ್ವಾಗತಿಸಿದರು, ಅಧ್ಯಾಪಿಕೆ ತಪ್ಸೀರಾ ನೆಕ್ಲಾಜೆ ಕಾರ್ಯಕ್ರಮ ನಿರ್ವಹಿಸಿ ರಶೀದಾ ಮೇಡಂ ದನ್ಯವಾದಗೈದರು, ಮಕ್ಕಳಿಗೆ ಸಿಹಿ ತಿಂಡಿ ವಿಸ್ತರಿಸಲಾಯಿತು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿ ಗೊಳಿಸಿದ ಅಧ್ಯಾಪಿಕೆಯರನ್ನು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರನ್ನು ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ವಂದಿಸಲಾಯಿತು.




