ಬಂಟ್ವಾಳ ತಾಲೂಕು ಕೆಡಿಪಿ ಸದಸ್ಯರಾಗಿ ಎ.ಬಿ ಅಬ್ದುಲ್ಲ ಕೊಳ್ನಾಡು ಆಯ್ಕೆ
ಸಾಲೆತ್ತೂರು : ಬಂಟ್ವಾಳ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ) ಸಮಿತಿ ಸದಸ್ಯರಾಗಿ ಕೊಳ್ನಾಡು ಗ್ರಾ.ಪಂ ಸದಸ್ಯ, ಎ.ಬಿ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ.
ಎ ಬಿ ಅಬ್ದುಲ್ ರವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಮಂತ್ರಿಗಳಾದ ಬಿ ರಮಾನಾಥ್ ರೈ ಅವರ ಶಿಫಾರಸಿನ ಮೇರೆಗೆ, ಜಿಲ್ಲೆ ಬಂಟ್ವಾಳ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನ (ಕೆಡಿಪಿ) ಸಮಿತಿಗೆ ಸದಸ್ಯರನ್ನಾಗಿ ನಾಮನಿರ್ದೇಶಿಸಿ ಆದೇಶಿಸಲಾಗಿದೆ.
ಗಾಂಧಿ ಗ್ರಾಮವೆಂದ ಹೆಸರುವಾಸಿಯಾಗಿರುವ ಕೊಳ್ನಾಡು ಗ್ರಾಮ ಪಂಚಾಯತಿಯಿಂದ ಎರಡು ಬಾರಿ ಸ್ಪರ್ಧಿಸಿ, ಎರಡು ಬಾರಿ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ, ಪಕ್ಷಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ, ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಮೂರು ಬಾರಿ ನಿರ್ದೇಶಕರಾಗಿ, ದಕ್ಷಿಣ ಕನ್ನಡ೫ ಜಿಲ್ಲಾ ವಕ್ಪ್ ಬೋರ್ಡ್ ಮಾಜಿ ಸದಸ್ಯರಾಗಿ, ಮಾಜಿ ಕೆಡಿಪಿ ಸದಸ್ಯರಾಗಿ, ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಕೊಳ್ನಾಡಿನ ಚಿರಪರಿಚಿತ ಜನಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು.





