September 21, 2026

ಧರ್ಮಸ್ಥಳ ಶವ ಹೂತ ಪ್ರಕರಣ: ಎಸ್ಐಟಿ ಕಚೇರಿಯಲ್ಲಿ ಪ್ರಣಬ್ ಮೊಹಂತಿ ಸಭೆ

0
image_editor_output_image422386385-1754473519485.jpg

ಬೆಳ್ತಂಗಡಿ: ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡದ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಮಂಗಳೂರಿನಿಂದ ಬೆಳ್ತಂಗಡಿಗೆ ಆಗಮಿಸಿದ್ದಾರೆ.

ಕಳೆದ 10 ದಿನಗಳಿಂದ ಧರ್ಮಸ್ಥಳದಲ್ಲಿ ದೂರುದಾರ ನೀಡಿದ ಮಾಹಿತಿಯಂತೆ ಶವ ಶೋಧ ಕಾರ್ಯ ನಡೆದಿದ್ದು , ಇಂದು 13ನೇ ಪಾಯಿಂಟ್ ನಲ್ಲಿ ಶವಶೋಧ ಕಾರ್ಯ ನಡೆಯಬೇಕಿತ್ತು, ಆದರೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಆಗಮಿಸುವ ಹಿನ್ನಲೆ ಇಂದು ಇನ್ನೂ ಶವ ಶೋಧ ಕಾರ್ಯ ಪ್ರಾರಂಭವಾಗಿಲ್ಲ. ಇಂದು ಬೆಳ್ತಂಗಡಿಗೆ ಎಸ್ ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಆಗಮಿಸಿದ್ದಾರೆ.

 

ಎಸ್ ಐಟಿ ಅಧಿಕಾರಿಗಳ ಜೊತೆ ಸಭೆ ನಡೆಸುವ ಸಾಧ್ಯತೆ ಇದ್ದು.ಕಳೆದ ಹತ್ತು ದಿನದ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಎಸ್ಐಟಿ ಚೀಫ್ ಮೊಹಂತಿ ಪಡೆಯಲಿದ್ದಾರೆ. ಡಿಐಜಿ ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸಿ ಸ್ಟೆಲ್ಲಾ ವರ್ಗೀಸ್ ಸೇರಿದಂತೆ ಅಧಿಕಾರಿಗಳ ಜೊತೆ ಪ್ರಣಬ್ ಮೊಹಂತಿ ಸಭೆ ನಡೆಸಿದ್ದಾರೆ.

ಅಲ್ಲದೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಧರ್ಮಸ್ಥಳ ಠಾಣೆ ಪಿಎಸ್ಐ ಸಮರ್ಥ ಗಾಣಿಗೇರ್ ಅವರನ್ನು ಕರೆಸಿಕೊಳ್ಳಲಾಗಿದ್ದು, ಎರಡು ದಿನಗಳ ಹಿಂದೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಯುಡಿಆರ್ ಪ್ರಕರಣಗಳ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲು ಧರ್ಮಸ್ಥಳ ಪಿಎಸ್ಐ ಅವರನ್ನು ಎಸ್ ಐಟಿ ಕರೆಸಿಕೊಂಡಿದೆ ಎಂದು ಹೇಳಲಾಗಿದೆ.

ಪಾಯಿಂಟ್ ನಂಬರ್ 6ರಲ್ಲಿ ಸಿಕ್ಕ ಕಳೇಬರ, ಗುರುತು ಮಾಡದ ಜಾಗದಲ್ಲಿ ಸಿಕ್ಕ ಕಳೇಬರ ಪ್ರಕರಣ ಸಂಬಂಧ ಮಾಹಿತಿಯನ್ನು ಧರ್ಮಸ್ಥಳ ಪಿಎಸ್ಐ ನೀಡಲಿದ್ದಾರೆ ಎಂದು ಹೇಳಲಾಗಿದ್ದು, ಸಭೆಯ ನಂತರ ಮುಂದಿನ ಕಾರ್ಯಾಚರಣೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You may have missed

error: Content is protected !!