ಧರ್ಮಸ್ಥಳ ಶವಶೋಧ ಕಾರ್ಯಾಚರಣೆಗೆ ಜಿಪಿಅರ್ ಯಂತ್ರ ಒದಗಿಸುವ ಖಾಸಗಿ ಕಂಪನಿಗಳಿಗೆ ಬೆದರಿಕೆ: ವಕೀಲ ಮಂಜುನಾಥ್ ಆರೋಪ
ಮಂಗಳೂರು: ಧರ್ಮಸ್ಥಳ ನಡೆಯುತ್ತಿರುವ ಶವಶೋಧ ಕಾರ್ಯಾಚರಣೆಗೆ ಜಿಪಿಆರ್ ಯಂತ್ರಗಳ ಬಳಕೆ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು, ಆದರೆ ಇದೀಗ ಆ ಯಂತ್ರಗಳು ತನಿಖೆಗೆ ಸಿಗದಂತೆ ಕೃಕ ಅಭಾವ ಸೃಷ್ಠಿಸಲಾಗಿದೆ ಎಂದು ಸುಜಾತ ಭಟ್ ಪರ ವಕೀಲ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೂರು ಸಾಕ್ಷಿದಾರ ಗುರುತಿಸಿರುವ ಸಮಾಧಿ ಸ್ಥಳಗಳಲ್ಲಿ ಅವಶೇಷಗಳನ್ನು ಗುರುತಿಸುವಲ್ಲಿ SÏT ಗೆ ನೆರವಾಗಲು ಆಧುನಿಕ ಜಿಪಿಆರ್ ತಂತ್ರಜ್ಞಾನವನ್ನು ಬಳಸುವಂತೆ ಸುಜಾತಾ ಭಟ್ SIT ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಸಮಗ್ರ ಹಾಗೂ ವೈಜ್ಞಾನಿಕ ತನಿಖೆ ನಡೆಸಲು ಈ ಸಲಕರಣೆಯು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ ಈ ಯಂತ್ರಗಳನ್ನು ಒದಗಿಸುವ ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಲಾಗಿದ್ದು, ಜಿಪಿಆರ್ ತಂತ್ರಜ್ಞಾನದ ಕೊರತೆ ಹಾಗೂ ಲಭ್ಯತೆಯ ಕೊರತೆಯ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.




