ಮಡಿಕೇರಿ: ಕಾರು, ಬೈಕ್ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಸಾವು
ಮಡಿಕೇರಿ : ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275ರ ಆನೆಕಾಡು ಬಳಿ ಶನಿವಾರ(ಆ.02) ಸಂಭವಿಸಿದೆ.
ಸುಳ್ಯದ ಪೆರುವಾಜೆ ನಿವಾಸಿ, 30 ವರ್ಷದ ಕಾರ್ತಿಕ್ ಭಟ್ ಮೃತ ಬೈಕ್ ಸವಾರ. ಕಾರ್ತಿಕ್ ಭಟ್ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಯಾಗಿದ್ದರು.
ಢಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ರಸ್ತೆ ಬದಿಯ ಕಾಡಿಗೆ ಬಿದ್ದಿವೆ. ಕಾರಿನಲ್ಲಿದ್ದವರಿಗೆ ಗಾಯಗಳಾಗಿದೆ.




