March 22, 2026

ಕೆಎಸ್‌ಆರ್‌ಟಿಸಿ ಕೇಂದ್ರ ಕಛೇರಿಯನ್ನು ಕಾಸರಗೋಡಿನಿಂದ ಕಾಂಞಂಗಾಡಿಗೆ ಸ್ಥಳಾಂತರಕ್ಕೆ ಯತ್ನ

0
IMG-20211224-WA0003.jpg

ಕಾಸರಗೋಡು: ಕೆ.ಎಸ್.ಆರ್.ಟಿ.ಸಿ.ಯ ಕಾಸರಗೋಡು ಜಿಲ್ಲೆಯ ಕೆಎಸ್ಆರ್ ಟಿಸಿ ಕೇಂದ್ರ ಕಚೇರಿಯನ್ನು ಕಾಂಞಂಗಾಡಿಗೆ ಸ್ಥಳಾಂತರ ನಡೆಸಲು ಹುನ್ನಾರ ಆರಂಭಗೊಂಡಿದೆ. ಇದೀಗ ಬಸ್ ನಿಲ್ದಾಣದ ಅಕ್ಕಪಕ್ಕದ ಕಟ್ಟಡಗಳನ್ನು ವಾಣಿಜ್ಯ ಬಳಕೆಗೆ ಬಿಡಲಾಗಿದ್ದು, ಈ ಪ್ರಧಾನ ಕೇಂದ್ರ ಕಚೇರಿಯನ್ನು ಕಾಂಞಂಗಾಡು ಗೆ ಸ್ಥಳಾಂತರಿಸಲು ರಹಸ್ಯವಾದ ಹುನ್ನಾರ ಆರಂಭಗೊಂಡಿದೆ.

ಜಿಲ್ಲೆಯಲ್ಲಿರುವ ಡಿಪೋವನ್ನು ಕಿಲೋಮೀಟರ್ ದೂರದ ಗ್ರಾಮಕ್ಕೆ ಸ್ಥಳಾಂತರಗೊಳಿಸಲು ಹುನ್ನಾರ ಆರಂಭಗೊಂಡಿದೆ. ಅಂತಾರಾಜ್ಯ ಟರ್ಮಿನಲ್ ಕೂಡಾ ಕಾಸರಗೊಡು ಡಿಪ್ಪೊದಲ್ಲಿ ಕಾಯ೯ಚರಿಸುತ್ತಿದೆ. ಬಸ್ ನಿಲ್ದಾಣ ಕಟ್ಟಡವನ್ನು ಸೋಮವಾರ ವಾಣಿಜ್ಯ ಬಳಕೆಗೆ ಬಿಡಲಾಗಿದೆ. ಇದಕ್ಕೆ ಕೆಎಎಸ್ ಆರ್ ಟಿಸಿ ಆಡಳಿತ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಜಿಲ್ಲಾಡಳಿತ ಆ ಸ್ಥಳದಲ್ಲಿರುವ ಕಟ್ಟಡ ಹಾಗೂ ಕಚೇರಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಹೊರಟಿದೆ. ಮುಂದಿನ ದಿನಗಳಲ್ಲಿ ಡಿಪೋದ ಮೇಲೆ ದುಷ್ಪರಿಣಾಮ ಬೀರಲಿದೆ.

ಮಂಗಳೂರು, ಪುತ್ತೂರು ಮತ್ತು ಸುಳ್ಯದಿಂದ ಬರುವ ಎಲ್ಲಾ ಅಂತರರಾಜ್ಯ ಬಸ್ಸುಗಳು ಕಾಸರಗೋಡು ಡಿಪೋದಿಂದ ಸೇವೆಯನ್ನು ನಡೆಸುತ್ತವೆ. ಕರ್ನಾಟಕ-ಕೇರಳ ಸಾರಿಗೆ ಬಸ್‌ಗಳು ಗಂಟೆಗಟ್ಟಲೆ ಸಂಚರಿಸುತ್ತವೆ, ಅಂತಾರಾಜ್ಯ ಸೇವೆಯು 92 ಬಸ್‌ಗಳಿಂದ ಕಾರ್ಯನಿರ್ವಹಿಸುತ್ತದೆ. ಸರ್ಕ್ಯೂಟ್ ಡಿಪೋದಿಂದ ಸೇವೆಯನ್ನು ಒದಗಿಸಲಾಗಿದೆ. 475 ನೌಕರರು ಡಿಪೋದಲ್ಲಿ ಕಾಯ೯ ನಿವ೯ಹಿಸುತ್ತಾರೆ.

ಕಾಸರಗೋಡಿನಿಂದ ಕೆಎಸ್ಆರ್ ಟಿಸಿ ಡಿಪೊವನ್ನು ಬದಲಾಯಿಸುವ ಕ್ರಮ ಕೈಬಿಡಬೇಕು ಎಂದು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಅಧಿಕಾರಿಗೆ ಎನ್.ಎ. ನೆಲ್ಲಿಕುನ್ನು ಶಾಸಕರು ಮನವಿ ಸಲ್ಲಿಸಿದ್ದಾರೆ. ಸರಕಾರ ಈ ತಿಮಾ೯ನವನ್ನು ಕೈಬಿಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎನ್ ಎ ನೆಲ್ಲಿಕುನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!