March 22, 2026

ಸುಳ್ಯ: ಪಾದಚಾರಿ ವೃದ್ಧ ಮಹಿಳೆಗೆ ಸ್ಕೂಟಿ ಡಿಕ್ಕಿ:
ಮಹಿಳೆಗೆ ಗಾಯ, ಸವಾರನಿಗೆ ಗಂಭೀರ ಗಾಯ

0
IMG-20211224-WA0004.jpg

ಸುಳ್ಯ: ಹರಿಹರ ಪಲ್ಲತ್ತಡ್ಕದಲ್ಲಿ ಅಜ್ಜಿಯೊಬ್ಬರು ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭ ಸ್ಕೂಟಿ ಡಿಕ್ಕಿ ಹೊಡೆದು ಅಜ್ಜಿಗೆ ಗಾಯಗಳಾಗಿದ್ದು, ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ವರದಿಯಾಗಿದೆ.

ಹರಿಹರ ಪಲ್ಲತ್ತಡ್ಕ ಪುಟ್ಟಮ್ಮ ಎಂಬ ವೃದ್ಧೆಯು ರಸ್ತೆ ದಾಟುತ್ತಿದ್ದ ಸಂದರ್ಭ ಕೊಲ್ಲಮೊಗ್ರು ಭಾಗದಿಂದ ಬರುತ್ತಿದ್ದ ಸ್ಕೂಟಿ ಅಜ್ಜಿಗೆ ಡಿಕ್ಕಿ ಹೊಡೆದಿದ್ದು, ಅಜ್ಜಿ ರಸ್ತೆಗೆಸೆಯಲ್ಪಟ್ಟು ಅವರ ಬಲ ಕೈ ಮತ್ತು ಕಾಲಿಗೆ ಗಾಯಗಳಾಗಿದೆ.

ಸ್ಕೂಟಿ ಸವಾರ ಜಯಪ್ರಕಾಶ್ ಎಂಬವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ತಲೆಗೆ, ಕೈಗೆ ಅಲ್ಪ ಗಾಯವಾಗಿದ್ದರೆ ಹೊಟ್ಟೆಯ ಭಾಗಕ್ಕೆ ಬಲವಾದ ಏಟು ಬಿದ್ದಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗಳಾಗಿರುವ ಕಾರಣ ಅವರು ಇನ್ನೂ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.

ವೃದ್ದೆ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಘಟನೆಯೊಂದಿಗೆ ಇದೇ ವಾರದ ಮೂರು ದಿನಗಳಲ್ಲಿ ಸುಳ್ಯದ ಪ್ರತ್ಯೇಕ ಪ್ರತ್ಯೇಕ ಕಡೆಗಳಲ್ಲಿ ಈ ರೀತಿಯ ಮೂರು ಘಟನೆಗಳು ನಡೆದಿದ್ದು ದ್ವಿಚಕ್ರ ವಾಹನ ಸವಾರರು ಮಹಿಳೆಯರು ರಸ್ತೆ ದಾಟುವ ಸಂದರ್ಭದಲ್ಲಿ ತಮ್ಮ ಚಾಲನೆಯ ಬಗ್ಗೆ ಜಾಗರೂಕತೆ ವಹಿಸಬೇಕೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!