September 22, 2026

ಸೌದಿ ಅರೇಬಿಯಾ: ನೋಡ ನೋಡುತ್ತಿದ್ದಂತೆಮುರಿದು ಬಿದ್ದ 360 ಡಿಗ್ರಿಯ ಬೃಹತ್ ಜೋಕಾಲಿ

0
image_editor_output_image-1795074045-1754039208281.jpg

ಸೌದಿ ಅರೇಬಿಯಾ: ನೋಡ ನೋಡುತ್ತಿದ್ದಂತೆ 360 ಡಿಗ್ರಿಯ ಬೃಹತ್ ಜೋಕಾಲಿ ಮುರಿದು ಬಿದ್ದ ಘಟನೆ ಸೌದಿ ಅರೇಬಿಯಾದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ ನಡೆದಿದೆ.

ಇದೀಗ ಜೋಕಾಲಿ ಮುರಿದ ಬಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೃಹತ್ ಜೋಕಾಲಿಯಲ್ಲಿ 23 ಮಂದಿ ಕುಳಿತ್ತಿದ್ದರು. ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಈ ವಿಡಿಯೋದಲ್ಲಿ 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿಯ ಮಧ್ಯಭಾಗವು ಎರಡು ತುಂಡುಗಳಾಗಿ ಮುರಿದು ಬೀಳುವುದನ್ನು ನೋಡಬಹುದು. ಇದರಲ್ಲಿ ಕುಳಿತುಕೊಂಡಿದ್ದ ಜನರು ಜೋರಾಗಿ ಕಿರುಚುತ್ತಿದ್ದು, ಮೇಲಿಂದ ಕೆಳಗೆ ಎಸೆಯಲ್ಪಡುತ್ತಿರುವ ದೃಶ್ಯವನ್ನು ಕಾಣಬಹುದು.

 

Leave a Reply

Your email address will not be published. Required fields are marked *

You may have missed

error: Content is protected !!