September 22, 2026

ಅಂತರ್ಜಾತಿ ಮದುವೆಯಾಗಿದ್ದ ಜೋಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಆತ್ಮಹತ್ಯೆ

0
image_editor_output_image-720541565-1753953289248.jpg

ಪಾಟ್ನಾ: ಮದುವೆಯಾದ 8 ತಿಂಗಳಿಗೆ ಅಂತರ್ಜಾತಿ ಮದುವೆಯಾಗಿದ್ದ ಜೋಡಿ ಫೇಸ್‌ಬುಕ್‌ನಲ್ಲಿ ವಿದಾಯದ ಪೋಸ್ಟ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.

ಬಹದ್ದೂರ್‌ಪುರ ಗ್ರಾಮದ ಶುಭಂ ಕುಮಾರ್ (19) ಹಾಗೂ ಆತನ ಪತ್ನಿ ಮುನ್ನಿ ಕುಮಾರಿ (18) ಮೃತರೆಂದು ಗುರುತಿಸಲಾಗಿದೆ. ಕೆಲ ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ ಇವರಿಬ್ಬರ ಪರಿಚಯವಾಗಿತ್ತು.

 

ಈ ಪರಿಚಯ ಪ್ರೇಮಕ್ಕೆ ತಿರುಗಿ, 2024ರ ಅಕ್ಟೋಬರ್‌ನಲ್ಲಿ ಮನೆಯವರ ವಿರೋಧದ ನಡುವೆಯೇ ಇಬ್ಬರು ಓಡಿಹೋಗಿ ವಿವಾಹವಾಗಿದ್ದರು.

ಮದುವೆಯ ನಂತರ, ಮುನ್ನಿ ಮನೆಯವರು ಇದನ್ನು ವಿರೋಧಿಸಿದ್ದರು. ಅಲ್ಲದೇ ರಾಜಿ ಪಂಚಾಯಿತಿ ನಡೆಸಿ, ಯುವತಿಯ ಸಿಂಧೂರವನ್ನು ಅಳಿಸಿ, ಆಕೆಯನ್ನು ಮನೆಯವರು ಕರೆದುಕೊಂಡು ಹೋಗಿದ್ದರು. ಬಳಿಕ ಡಿಸೆಂಬರ್‌ನಲ್ಲಿ ಮತ್ತೆ ಒಂದಾಗಿ, ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.

ದಂಪತಿಯ ಸಂಬಂಧಿಕರೊಬ್ಬರು ಮಗುವಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿ, ಶುಭಂ ಮನೆಗೆ ಬಂದಿದ್ದರು. ಈ ವೇಳೆ ಅವರು ಎಷ್ಟೇ ಬಾಗಿಲು ಬಡಿದರೂ, ತೆರೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಶುಭಂ ನೇಣು ಬಿಗಿದುಕೊಂಡಿದ್ದ. ಆತನ ಪತ್ನಿ ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದದನ್ನು ಗಮನಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!