September 22, 2026

ಹಿಟ್ ಆಂಡ್ ರನ್: ವಿದ್ಯಾರ್ಥಿ ಸಾವು: ನಟಿ ನಂದಿನಿ ಕಶ್ಯಪ್ ಬಂಧನ

0
image_editor_output_image-1273663334-1753944866607.jpg

ದಿಸ್ಪುರ್: ಅಸ್ಸಾಮಿನ ಸ್ಟಾರ್ ನಟಿ ನಂದಿನಿ ಕಶ್ಯಪ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೀದಿ ದೀಪ ದುರಸ್ತಿ ಮಾಡುತ್ತಿದ್ದ ವಿದ್ಯಾರ್ಥಿಗೆ ನಂದಿನಿ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯಾರ್ಥಿ ಸಮಿಯುಲ್ ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾನೆ.

ಜುಲೈ 25ರಂದು ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಬೀದಿ ದೀಪಗಳನ್ನು ವಿದ್ಯಾರ್ಥಿ ದುರಸ್ತಿ ಮಾಡುತ್ತಿದ್ದ. ಇದೇ ವೇಳೆ ನಟಿ ನಂದಿನಿ ಕಶ್ಯಪ್ ಕುಡಿದ ಮತ್ತಿನಲ್ಲಿ ತನ್ನ ಬೊಲೆರೊ ಎಸ್‌ಯುವಿಯನ್ನು ವೇಗವಾಗಿ ಚಲಾಯಿಸಿದ್ದಾರೆ. ಸುಮಾರು 120 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಕಾರನ್ನು ಚಾಲನೆ ಮಾಡಿ ಗುವಾಹಟಿಯ ದಖಿಂಗಾವ್ನಲ್ಲಿ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಕಾರಿನಿಂದ ಡಿಕ್ಕಿ ಹೊಡೆದ ನಟಿ ಮದ್ಯದ ಅಮಲಿನಲ್ಲಿದ್ದಳು ಎನ್ನಲಾಗಿದೆ.

 

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಮಿಯುಲ್ 6 ಅಡಿ ಎತ್ತರ ಹಾರಿ ಕೆಳಗೆ ಬಿದ್ದಿದ್ದಾನೆ. ಆ ಕೂಡಲೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಅಪಘಾತದ ನಾಲ್ಕು ದಿನಗಳ ನಂತರ ನಿನ್ನೆ ಚಿಕಿತ್ಸೆ ಫಲಿಸದೆ 22 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಮಿಯುಲ್ ಪ್ರಾಣಬಿಟ್ಟಿದ್ದಾನೆ. ಈ ಘಟನೆ ಬಗ್ಗೆ ಅಸ್ಸಾಂನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಭಾವಿ ಸೆಲೆಬ್ರಿಟಿಗಳಿಗೆ ಕಾನೂನು ಅನ್ವಯ ಆಗೋದಿಲ್ವಾ ಎಂದು ಜನರು ಆಕ್ರೋಶ ಹೊರ ಹಾಕಿದ್ದರು. ಈಗ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ನಟಿ ನಂದಿನಿಯನ್ನು ದಿಸ್ಪುರ್ ಪೋಲಿಸರು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!