September 22, 2026

ಹೀಲಿಯಂ ಅನಿಲವನ್ನು ಸೇವಿಸಿ ಚಾರ್ಟರ್ಡ್ ಅಕೌಂಟೆಂಟ್ ಆತ್ಮಹತ್ಯೆ

0
image_editor_output_image-696530019-1753943510994.jpg

ನವದೆಹಲಿ: ರಾಷ್ಟ್ರ ರಾಜಧಾನಿಯ ಬಾರಾಖಂಬಾ ಪ್ರದೇಶದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಹೀಲಿಯಂ ಅನಿಲವನ್ನು ಸೇವಿಸುವ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಧೀರಜ್ ಕನ್ಸಾಲ್ ಎಂಬಾತ ಗುರುಗ್ರಾಮ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಇಂಡಿಯಾಮಾರ್ಟ್‌ನಲ್ಲಿ ಹುಡುಕಿದ ನಂತರ ಗಾಜಿಯಾಬಾದ್‌ನ ಪೂರೈಕೆದಾರರಿಂದ ಹೀಲಿಯಂ ಅನಿಲವನ್ನು ಪಡೆದಿದ್ದನು.

 

ಕಠಿನ ನಿರ್ಧಾರ ತಳೆಯುವ ಮೊದಲು, ಧೀರಜ್ ಫೇಸ್‌ಬುಕ್‌ನಲ್ಲಿ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದ “ಸಾವು ನನಗೆ ಜೀವನದ ಅತ್ಯಂತ ಸುಂದರವಾದ ಕ್ಷಣ. ದಯವಿಟ್ಟು ನನ್ನ ಸಾವಿನ ಬಗ್ಗೆ ದುಃಖಿಸಬೇಡಿ. ಆತ್ಮಹತ್ಯೆ ತಪ್ಪಲ್ಲ ಏಕೆಂದರೆ ನನ್ನ ಮೇಲೆ ನನಗೆ ಯಾವುದೇ ಜವಾಬ್ದಾರಿಗಳಿಲ್ಲ.” ಎಂದು ಬರೆದುಕೊಂಡಿದ್ದ.

ಧೀರಜ್ ಕನ್ಸಾಲ್ ಜುಲೈ 20 ರಿಂದ 28 ರವರೆಗೆ ಎಂಟು ದಿನಗಳಿಗೆ ಫ್ಲಾಟ್ ಬುಕ್ ಮಾಡಿದ್ದ. 3,500 ರೂ.ನೀಡಿ ಹೀಲಿಯಂ ಖರೀದಿಸಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!