ಪುತ್ತೂರು: ಫೈನಾನ್ಸ್ ಮ್ಯಾನೇಜರ್ ನಿಂದ ವ್ಯಕ್ತಿಗೆ ಹಲ್ಲೆ: ಆಸ್ಪತ್ರೆಗೆ ದಾಖಲು
ಪುತ್ತೂರು: ವ್ಯಕ್ತಿಯೊಬ್ಬರಿಗೆ ಏಕಾಏಕಿ ಗಂಭೀರವಾಗಿ ಹಲ್ಲೆ ಮಾಡಿ ಜೀವಬೆದರಿಕೆಯೊಡ್ಡಿದ ಘಟನೆ ಪುತ್ತೂರಿನ ಕೋರ್ಟ್ ರೋಡ್ ರಿಕ್ಷಾ ನಿಲ್ದಾಣದ ಬಳಿ ನಡೆದಿದೆ.
ಗಂಭೀರವಾಗಿ ಹಲ್ಲೆಗೊಳಗಾದವರನ್ನ ಪುತ್ತೂರಿನ ಉರ್ಲಾಂಡಿ ನಿವಾಸಿ ಹರೀಶ್ ಕುಮಾರ್ ಹೆಗ್ಡೆ (52) ಎಂದು ಗುರುತಿಸಲಾಗಿದೆ. ಐಐಎಫ್‌ಎಲ್ ಫೈನಾನ್ಸ್ ಮ್ಯಾನೇಜರ್ ಆಗಿರುವ ಪ್ರಸಾದ್ ಗೌಡ ಎಂಬವರು ಹರೀಶ್ ಕುಮಾರ್ ಹೆಗ್ಡೆಗೆ ಗಂಭೀರವಾಗಿ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಹರೀಶ್ ಕುಮಾರ್ ಹೆಗ್ಡೆ ಅವರ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸ್ಟಿಕ್ ನಲ್ಲಿ ಹೊಡೆದ ಪರಿಣಾಮ ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ.
ಗಾಯಾಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಹರೀಶ್ ಕುಮಾರ್ ಹೆಗ್ಡೆ ಮೇಲೆ ಕೂಡ ಹಲ್ಲೆಗೈದ ಪ್ರಸಾದ್ ಗೌಡ ಆರೋಪ ಹೊರಿಸಿದ್ದಾರೆ





