2 ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ
ಮಂಡ್ಯ: 2 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.
ಪೂಜಾ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಪೋಷಕರ ವಿರೋಧದ ನಡುವೆಯೂ ತಾನು ಪ್ರೀತಿಸಿದ ಅಭಿನಂದನ್ ಜೊತೆ ಮದುವೆಯಾಗಿದ್ದಳು.
ಆದರೆ ಮದುವೆಯಾದ ಬಳಿಕ ಗಂಡನ ಮನೆಯವರು ಮಹಿಳೆಗೆ ಕಿರುಕುಳ ನೀಡಿದ್ದಾರೆ. ಇದನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ.
ನಿನ್ನೆ (ಜು.25) ರಾತ್ರಿ ಕೊಲೆ ಮಾಡಿ ಈಕೆಯೇ ನೇಣು ಹಾಕಿಕೊಂಡಂತೆ ಮಾಡಿದ್ದಾರೆ. ಗಂಡನೇ ಈ ಕೃತ್ಯ ಎಸಗಿದ್ದಾನೆ ಎಂದು ಪೂಜಾ ಕುಟುಂಬಸ್ಥರು ದೂರಿದ್ದಾರೆ.





