March 13, 2026

ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ದಾಳಿ ನಡೆಸಿ ಯುವಕನ ಕೊಲೆ

0
image_editor_output_image1848422390-1753518211827.jpg

ಆನೇಕಲ್: ಸ್ನೇಹಿತರ ಜೊತೆ ಮಾತನಾಡುತ್ತಾ ಅಂಗಡಿ ಬಳಿ ಕುಳಿತ್ತಿದ್ದ ಯುವಕನ ಮೇಲೆ ಅಪರಿಚಿತ ಗ್ಯಾಂಗೊಂದು ಹಲ್ಲೆ ಮಾಡಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ.

ಆನೇಕಲ್ ಪಟ್ಟಣದ ವಾರ್ಡ್ 9ರ ನಿವಾಸಿ ರವಿಕುಮಾರ್ ಮೃತ ಯುವಕ. ರವಿಕುಮಾರ್ ರಾತ್ರಿ 9:30ರ ಸುಮಾರಿಗೆ ಸ್ನೇಹಿತರ ಜೊತೆ ವಿನಾಯಕ ನಗರ ಸುಂದರ್ ರಾಜ್ ಬಡಾವಣೆಯ ಅಂಗಡಿ ಬಳಿ ಕುಳಿತಿದ್ದ.

ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದೊಣ್ಣೆಯಿಂದ ರವಿಕುಮಾರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ರವಿಕುಮಾರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ರವಿಕುಮಾರ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!