March 13, 2026

ಬೈಕ್‌ನ ಮೇಲೆ ಉರುಳಿ ಬಿದ್ದ ಮರ: ದಂಪತಿ ಸಾವು

0
image_editor_output_image-1552121974-1753349238838.jpg

ರಾಯಚೂರು: ಬೈಕ್‌ನಲ್ಲಿ ಹೊರಟಿದ್ದಾಗ ಬೃಹತ್ ಮರವೊಂದು ಉರುಳಿ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಹೊರವಲಯದಲ್ಲಿ ನಡೆದಿದೆ.

ರಮೇಶ್(25), ಅನಸೂಯ(22) ಮೃತ ದಂಪತಿ. ಪುತ್ರಿಯನ್ನು ಸೌಜನ್ಯ (3) ಎಂದು ಗುರುತಿಸಲಾಗಿದೆ.

ದಂಪತಿ ತಮ್ಮ ಮಗುವಿನ ಜೊತೆಗೆ ಬೈಕ್‌ನಲ್ಲಿ ಮುದಗಲ್ ಪಟ್ಟಣದಿಂದ ನಾಗಲಾಪೂರ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೃಹತ್ ಬಸರಿ ಮರವೊಂದು ಗಾಳಿಗೆ ಬುಡ ಸಮೇತ ಬೈಕ್ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Leave a Reply

Your email address will not be published. Required fields are marked *

error: Content is protected !!