March 13, 2026

ಪಡುಬಿದ್ರಿ: 6 ವರ್ಷದ ಫಾತಿಮಾ ಮಾಹಿರಾ ಮೃತ್ಯು

0
image_editor_output_image-304179498-1753349618422.jpg

ಪಡುಬಿದ್ರಿ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಆರು ವರ್ಷದ ಮಗುವೊಂದು ಮೃತಪಟ್ಟಿರುವುದಾಗಿ ವಾರದಿಯಾಗಿದೆ.

ಹೆಜಮಾಡಿ ಎಸ್.ಎಸ್. ರೋಡ್ ನ ಕಲಂದ‌ರ್ ಹಾಗು ಮುಮ್ತಾಜ್ ದಂಪತಿಯ ಪುತ್ರಿ ಆರು ವರ್ಷದ ಫಾತಿಮಾ ಮಾಹಿರಾ ಮೃತಪಟ್ಟಿದ್ದಾಳೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈಕೆ ಹೆಜಮಾಡಿಯ ವಿದ್ಯಾ ಪ್ರಸಾರ ಶಾಲೆಯಲ್ಲಿ ಎಲ್ ಕೆಜಿ ವಿದ್ಯಾರ್ಥಿನಿಯಾಗಿದ್ದಳು.

Leave a Reply

Your email address will not be published. Required fields are marked *

error: Content is protected !!