ಉಡುಪಿ: ಅಡ್ಡಾ ದಿಡ್ಡಿಯಾಗಿ ಚಲಿಸಿದ ವಿದೇಶಿ ನೋಂದಣಿಯ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ
ಮಣಿಪಾಲ: ಉಡುಪಿ ಯಿಂದ ಮಣಿಪಾಲಕ್ಕೆ ಅಡ್ಡಾ ದಿಡ್ಡಿಯಾಗಿ ಚಲಿಸಿದ ವಿದೇಶಿ ನೋಂದಣಿಯ ಕಾರೊಂದು ಸಿಂಡಿಕೇಟ್ ಸರ್ಕಲ್‌ನಿಂದ ಐನಾಕ್ಸ್ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ರವಿವಾರ ಸಂಭವಿಸಿದೆ.
ಹಳದಿ ಬಣ್ಣದ ಈ ಕಾರಿನೊಳಗೆ ಇಬ್ಬರು ವ್ಯಕ್ತಿಗಳು ಇದ್ದರು. ಅಪಘಾತ ಸಂಭವಿಸಿದ ತತ್‌ಕ್ಷಣ ಸ್ಥಳೀಯರು ಒಟ್ಟು ಸೇರಿದ್ದು ಠಾಣೆಯವರೆಗೆ ತೆರಳಿ ಸಂಧಾನ ನಡೆಸಲಾಗಿದೆ.
ವಾರಾಂತ್ಯದಲ್ಲಿ ಮಣಿಪಾಲ ಭಾಗದಲ್ಲಿ ಮಾದಕ ದ್ರವ್ಯ ಚಟುವಟಿಕೆಗಳು ನಡೆಯುತ್ತಿದ್ದು, ಅನ್ಯ ರಾಜ್ಯ ನೋಂದಣಿಯ ವಾಹನಗಳು ಕೂಡ ಎಲ್ಲೆಂದರಲ್ಲಿ ಸುತ್ತಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.




