ಕರಡಿ ದಾಳಿಗೆ ಯುವಕ ಸ್ಥಳದಲ್ಲೇ ಸಾವು
ಯಳಂದೂರು(ಚಾಮರಾಜನಗರ ಜಿಲ್ಲೆ): ತಾಲೂಕಿನ ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ.
ಬಿಳಿಗಿರಿರಂಗನ ಬೆಟ್ಟದ ಸೀಗೆಬೆಟ್ಟ ಪೋಡಿನ ನಿವಾಸಿ ಸಿದ್ದೇಗೌಡ (30) ಎಂಬುವರೆ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಅರಣ್ಯ ಪ್ರದೇಶದ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಸೋಮವಾರ ಮಧ್ಯಾಹ್ನ ತೆರಳಿದ ಸಮಯದಲ್ಲಿ ನೇರಿಗೇರಿ ಎಂಬ ಅರಣ್ಯ ಪ್ರದೇಶದಲ್ಲಿ ಇವರ ಮೇಲೆ ಕರಡಿ ದಾಳಿ ಮಾಡಿ ಸ್ಥಳದಲ್ಲೇ ಇವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ವಹಿಸಿದ್ದಾರೆ.




