ಪತ್ನಿಯಿಂದ ವಿಚ್ಛೇದನ ಪಡೆದ ಖುಷಿಯಲ್ಲಿ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ
ದಿಸ್ಪುರ್: ಪತ್ನಿಯಿಂದ ವಿಚ್ಛೇದನ ಪಡೆದ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್‌ನಲ್ಲಿ ನಡೆದಿದೆ.
ಮಾಣಿಕ್ ಅಲಿ ಹಾಲಿನಿಂದ ಸ್ನಾನ ಮಾಡಿದ ವ್ಯಕ್ತಿ. ಸ್ನಾನದ ವಿಡಿಯೋ ಮಾಡಿಕೊಳ್ಳುತ್ತಾ, ʻನಾನು ಈಗ ಸ್ವತಂತ್ರʼ ಎಂದು ಹೇಳಿಕೊಂಡಿದ್ದಾನೆ. ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿರುವೆ. ನಾನು ಇಂದಿನಿಂದ ನಾನು ಸ್ವತಂತ್ರ. ಶುದ್ಧೀಕರಣ ಮತ್ತು ಬಿಡುಗಡೆಯ ಸಾಂಕೇತಿಕವಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾನೆ.




