June 21, 2026

ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಆತ್ಮಹತ್ಯೆ

0
image_editor_output_image-1074058012-1752484846617.jpg

ಪುದುಚೆರಿ: ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್, ಸೋಶಿಯಲ್ ಮೀಡಿಯಾ ಸ್ಟಾರ್ ಸ್ಯಾನ್ ರೆಚಲ್ ಪುದುಚೆರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

26 ವರ್ಷದ ಸ್ಯಾನ್ ರೆಚಲ್ ತನ್ನ ತಂದೆಯ ಮನೆಗೆ ಭೇಟಿ ನೀಡಿದ ಸಂದರ್ಭ ಹೆಚ್ಚಿನ ಸಂಖ್ಯೆಯ ಮಾತ್ರೆಗಳನ್ನು ಸೇವಿಸಿದ್ದರು. ಮೊದಲಿಗೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಯಾನ್ ರೆಚಲ್ ಸಾವನ್ನಪ್ಪಿದ್ದಾರೆ.

ಆರ್ಥಿಕ ಒತ್ತಡ ಮತ್ತು ವೈಯಕ್ತಿಕ ಒತ್ತಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಸ್ಯಾನ್ ರೆಚಲ್ ಡೆತ್ ನೋಟ್‌ನಲ್ಲಿ ಆಕೆಯ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!