ಮಂಗಳೂರು: ಪಿ.ಜಿ ಯಲ್ಲಿ ಕೇರಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: ನಗರದ ಪಿ.ಜಿ.ಯೊಂದರಲ್ಲಿ ಕೇರಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಟ್ಟಾಯಂ ಮೂಲದ ಹನೀಫ್ ಖಾನ್ (24) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ರೂಮಿನ ಬಾಗಿಲು ಹಾಕಿ ಕೈಯನ್ನು ಬ್ಲೇಡ್ ನಿಂದ ಗೀರಿಕೊಂಡ ಬಳಿಕ ಕಿಟಕಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಹನೀಫ್ ಖಾನ್ ನಗರದ ಕಾಲೇಜೊಂದರಲ್ಲಿ ಪದವಿ ಕಲಿಯುತ್ತಿದ್ದ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




